ETV Bharat / state

ಆದಿವಾಸಿ ಮಹಿಳೆಯರ ಮೇಲೆ ಗ್ರಾಮ ಪಂಚಾಯತ್​ ಸದಸ್ಯನಿಂದ ಹಲ್ಲೆ ಆರೋಪ - assault on tribal women by gram panchayat member

ಉಳಿಮೆ ಮಾಡಲು ಬರಬಾರದು ಎಂದು ಸೋಲಿಗ ಜನಾಂಗದ ಮಹಿಳೆಯರ ಮೇಲೆ ಗ್ರಾಮ ಪಂಚಾಯತ್​ ಸದಸ್ಯ ಹಲ್ಲೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಅಮ್ಮತ್ತಿಹಾಡಿ‌ಯಲ್ಲಿ ನಡೆದಿದೆ.

assault on tribal women
ಆದಿವಾಸಿ ಮಹಿಳೆಯರ ಮೇಲೆ ಹಲ್ಲೆ ಆರೋಪ
author img

By

Published : Dec 16, 2022, 2:18 PM IST

ಆದಿವಾಸಿ ಮಹಿಳೆಯರ ಮೇಲೆ ಹಲ್ಲೆ ಆರೋಪ

ಮೈಸೂರು: ಜಮೀನಿಗೆ ಬರಬಾರದು ಎಂದು ಸೋಲಿಗ ಜನಾಂಗದ ಮಹಿಳೆಯರ ಮೇಲೆ ಗ್ರಾಮ ಪಂಚಾಯತ್​ ಸದಸ್ಯ ಹಲ್ಲೆ ಮಾಡಿರುವ ಆರೋಪ ತಡವಾಗಿ ಕೇಳಿಬಂದಿದೆ. ಪಿರಿಯಾಪಟ್ಟಣ ತಾಲೂಕಿನ ಅಮ್ಮತ್ತಿಹಾಡಿ‌ ನಿವಾಸಿ ಭೈರಯ್ಯ ಕುಟುಂಬದ ಮಹಿಳೆಯರಾದ ಜಯಮ್ಮ, ಲಕ್ಷ್ಮಿ, ಶೋಭಾ ಎನ್ನುವರ ಮೇಲೆ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಎಂಬಾತ ಡಿ.10 ರಂದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಏನಿದು ಘಟನೆ: ಹಲವಾರು ವರ್ಷಗಳಿಂದ ಭೈರಯ್ಯ ಕುಟುಂಬಸ್ಥರು ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಏಕಾಏಕಿ ಬಂದ ಲೋಕೇಶ್, ಈ ಜಮೀನು ನಮಗೆ ಸೇರಿದೆ. ಇನ್ನು ಮೇಲೆ ಯಾರು ಉಳಿಮೆ ಮಾಡಲು ಬರಬಾರದು ಎಂದು ತಾಕೀತು ಮಾಡಿದ್ದಾನೆ.

ಇದನ್ನು ಆದಿವಾಸಿ ಮಹಿಳೆಯರು ಪ್ರಶ್ನಿಸಿದ್ದು, ಜಮೀನಿಗೆ ಹೋಗುತ್ತಿದ್ದಾಗ ಮಹಿಳೆಯರಿಗೆ ದೊಣ್ಣೆಯಿಂದ ಹೊಡದು ಹಲ್ಲೆ ಮಾಡಿದ್ದಾನೆ. ಮಹಿಳೆಯರೂ ಕೂಡ ಆತನಿಗೆ ಹೊಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೀದಿಯಲ್ಲೇ ಅತ್ತೆ ಮೇಲೆ ಸೊಸೆಯಿಂದ ಹಲ್ಲೆ.. ಗಂಡನ ಏಟಿಗೂ ಬಗ್ಗದ ಪತ್ನಿ

ಇನ್ನು ಗಾಯಗೊಂಡ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೊಲೀಸ್​ ಠಾಣೆಗೆ ದೂರು ನೀಡಲು ಹೋದಾಗ, ಪೊಲೀಸರು ನೆಪ ಹೇಳಿ ಕಳುಹಿಸಿದ್ದಾರೆ ಎಂದು ನೊಂದ ಮಹಿಳೆಯರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.