ಮೈಸೂರು: ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಗಾಯಿತ್ರಿಪುರಂ ನಿವಾಸಿ ಶೇಖರ್ ಹಾಗೂ ಶಂಕರಯ್ಯ ಎಂಬಿಬ್ಬರು ಮನೆಯಲ್ಲಿ ಶೇಖರಿಸಿಟ್ಟಿದ್ದ ಮದ್ಯವನ್ನು ಅಬಕಾರಿ ಪೊಲೀಸರ ವಶಪಡಿಸಿಕೊಂಡಿದ್ದಾರೆ.
ಇವರು ಗಾಯಿತ್ರಿಪುರಂನ ಮೀನು ಮಾರಾಟ ಕೇಂದ್ರದ ಬಳಿ ನಿಂತು ಮದ್ಯ ಮಾರಾಟ ಮಾಡುತ್ತಿದ್ದರು. ಓರ್ವ ವ್ಯಕ್ತಿ ಅಂಗಡಿ ಬಳಿ ನಿಂತು ಮದ್ಯ ಲಭ್ಯವಿರುವ ಬಗ್ಗೆ ಮಾಹಿತಿ ನೀಡುತ್ತಿದ್ದ. ಎಣ್ಣೆ ಬೇಕು ಅಂದವರನ್ನು ಮತ್ತೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ರವಾನಿಸಲಾಗುತ್ತಿತ್ತು. ಈ ಎಲ್ಲಾ ಎಲ್ಲ ವ್ಯವಹಾರ ವಾಟ್ಸ್ ಆ್ಯಪ್‌ನಲ್ಲಿಯೇ ನಡೆಯುತ್ತಿತ್ತು.
ಈ ವಿಚಾರ ತಿಳಿದು ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಮನೆಯಲ್ಲಿಟ್ಟಿದ್ದ 66, 720 ರೂ. ಮೌಲ್ಯದ 13.5 ಲೀಟರ್ ಮದ್ಯವನ್ನು ಸೀಜ್ ಮಾಡಿದ್ದಾರೆ.
ಆನ್ಲೈನ್ನಲ್ಲೂ ವಂಚನೆ:
ಪೇಸ್ಬುಕ್ನಲ್ಲಿ ಮದ್ಯದ ಬಗ್ಗೆ ಬರೆದುಕೊಂಡಿರುವ ಇವರು, ಆನ್ಲೈನ್ನಲ್ಲಿ ದಿನದ 24 ಗಂಟೆಯೂ ಮದ್ಯ ಲಭ್ಯವಾಗುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಎಣ್ಣೆ ಪ್ರಿಯರು ಆಸೆಗೆ ಬಿದ್ದು ಇವರಿಗೆ ಹಣ ನೀಡಿ ಮೋಸ ಹೋಗಿದ್ದಾರೆ.