ಮೈಸೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಅಪ್ಪು ಸ್ಮರಣಾರ್ಥ ಸಾವಿರಾರು ವಿದ್ಯಾರ್ಥಿಗಳು ಪುನೀತ್ ರಾಜ್ ಕುಮಾರ್ ಹಾಗೂ ಪರಿಸರ ಚಿತ್ರಗಳನ್ನು ಬಿಡಿಸಿದರು. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ, ಅಪ್ಪು ಅಭಿಮಾನಿ ಬಳಗ ಹಾಗೂ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಸಹಯೋಗದೊಂದಿಗ ಗಂಧದಗುಡಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿತ್ತು.
![Drawing competition in the memory of Puneeth](https://etvbharatimages.akamaized.net/etvbharat/prod-images/16788963_appu.jpg)
1000ಕ್ಕೂ ಹೆಚ್ಚು ಮಕ್ಕಳು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ಪರಿಸರ, ಬೆಟ್ಟಗುಡ್ಡಗಳು, ನದಿ ಕೆರೆ, ಅರಣ್ಯ, ಪರ್ವತ, ಜಲಪಾತಗಳಿಗೆ ಸಂಬಂಧಿಸಿದ ಚಿತ್ರಗಳು ಮತ್ತು ಅರಣ್ಯದಲ್ಲಿ ಪುನೀತ್ ರಾಜ್ ಕುಮಾರ್ ಇರುವ ಚಿತ್ರಗಳನ್ನು ಬಿಡಿಸಲು ಸೂಚಿಸಲಾಗಿತ್ತು.
ಸ್ಪರ್ಧೆ ವಿಜೇತರಿವರು: ವಿವಿಧ ವಿಭಾಗದ ಅತ್ಯುತ್ತಮ ಚಿತ್ರಕಲೆ ಬಿಡಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. 8 ರಿಂದ 12 ವರ್ಷದ ವಯೋಮಿತಿಯಲ್ಲಿ ಮೊದಲನೇ ಬಹುಮಾನ ಧೃತಿ ವಿಶಾ, ದ್ವಿತೀಯ ಬಹುಮಾನ ಹರ್ಷಿತಾ, ತೃತೀಯ ಬಹುಮಾನ ದ್ವೀತಿಚಾನಸ್ಯ ಪಡೆದಿದ್ದಾರೆ.
12 ರಿಂದ 18 ವಯೋಮಿತಿಯಲ್ಲಿ ಮೊದಲನೇ ಬಹುಮಾನ ಕುಮಾರ್ ನಾಯಕ್, ದ್ವಿತೀಯ ಬಹುಮಾನ ವಿಷ್ಣು ಪ್ರಸಾದ, ತೃತೀಯ ಬಹುಮಾನ ಅಭಿಜ್ನ ಅವರಿಗೆ ದೊರೆತಿದೆ. 18ವರ್ಷದ ಮೇಲ್ಪಟ್ಟ ವಿಭಾಗದಲ್ಲಿ ಮೊದಲನೇ ಬಹುಮಾನ ಮಧುಸೂದನ್ ಎಸ್, ದ್ವಿತೀಯ ಬಹುಮಾನ ಮಹೇಶ್ ಬಸವೇಗೌಡ, ತೃತೀಯ ಬಹುಮಾನವನ್ನು ಬಂಗಾರ ಅವರಿಗೆ ನೀಡಲಾಯಿತು.
ಇದನ್ನೂ ಓದಿ: ಅಪ್ಪುವಿಗೆ ಪ್ರೀತಿಯ ಊಟವನ್ನು ಅರ್ಪಿಸಿ ಭಾವುಕಾರಾದ ಹುಬ್ಬಳ್ಳಿಯ ಅಭಿಮಾನಿ..