ಮೈಸೂರು: ಹಾಡಹಗಲೇ ಕಾರಿನ ಗಾಜು (ಕಿಟಕಿ ಗಾಜು) ಒಡೆದು 10 ಲಕ್ಷ ರೂ. ದೋಚಿರುವ ಘಟನೆ ನಡೆದಿದ್ದು, ಖದೀಮರು ಪರಾರಿಯಾಗಿದ್ದಾರೆ.
ಪಿರಿಯಾಪಟ್ಟಣದ ಮನೋಜ್ ಕುಮಾರ್ ಅವರು 10 ಲಕ್ಷ ರೂ. ಕಳೆದುಕೊಂಡು ಪರಿತಪಿಸುವಂತಾಗಿದೆ. ಚಿನ್ನ, ಬೆಳ್ಳಿ ವ್ಯಾಪಾರಿಯಾಗಿರುವ ಮನೋಜ್, ವ್ಯಾಪಾರಕ್ಕಾಗಿ ಹಣ ಇಟ್ಟುಕೊಂಡು ಮೈಸೂರಿಗೆ ಬಂದಿದ್ದರು.
![A thief stole 10 lakh rupees in mysore](https://etvbharatimages.akamaized.net/etvbharat/prod-images/9691680_mysore.jpg)
ವಿ.ವಿ. ಪುರಂನಲ್ಲಿರುವ ಎಸ್ಬಿಐ ಬ್ಯಾಂಕ್ ಮುಂಭಾಗ ಕಾರು ನಿಲ್ಲಿಸಿ ಸ್ಟೇಟ್‌ಮೆಂಟ್ ಪಡೆಯಲು ಬ್ಯಾಂಕ್ ಒಳಗೆ ಹೋದ ಸಂದರ್ಭ, ಕಳ್ಳತನಕ್ಕೆ ಹೊಂಚು ಹಾಕಿದ್ದ ಖದೀಮರು 10 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ. ಬ್ಯಾಂಕ್ನಿಂದ ಸ್ಟೇಟ್‌ಮೆಂಟ್ ಪಡೆದು ವಾಪಸ್ ಕಾರಿನ ಬಳಿ ಬಂದು ನೋಡಿದಾಗ, ಗಾಜು ಒಡೆದು ಹಣ ದೋಚಿರುವುದನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಯಲ್ಲಾಲಿಂಗ ಮಠದ ಆವರಣದಲ್ಲಿದ್ದ ಹಸಿ ಗಾಂಜಾ ಗಿಡ ವಶಕ್ಕೆ: ಆರೋಪಿ ಪರಾರಿ
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಕುರಿತು ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.