ETV Bharat / state

ನಾಗಿಣಿ ನೃತ್ಯ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೊಬೈಲ್​​ ಕಿತ್ತೆಸೆದ ಪೂಜಾರಿ - video

ನೃತ್ಯದ ವಿಡಿಯೋವನ್ನು ಚಿತ್ರೀಕರಣ ಮಾಡುತ್ತಿದ್ದಾಗ ರೊಚ್ಚಿಗೆದ್ದ ಪೂಜಾರಿಯೊಬ್ಬ ಮೊಬೈಲ್​ಅನ್ನು ಒಡೆದು ಹಾಕಿದ್ದಾನೆ. ಇದರಿಂದ ಹಬ್ಬದ ವಾತಾವರಣದಲ್ಲಿ ಸ್ವಲ್ಪ ಗೊಂದಲ ಉಂಟಾಯಿತು.

ನಾಗಿಣಿ ನೃತ್ಯದ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೊಬೈಲ್​​ ಕಿತ್ತೆಸೆದ ಪೂಜಾರಿ
author img

By

Published : Apr 17, 2019, 3:46 PM IST

ಮೈಸೂರು: ತಾನು ನಾಗರಹಾವಿನ ರೀತಿಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವೊಂದನ್ನು ಚಿತ್ರೀಕರಿಸುತ್ತಿದ್ದಾಗ ರೊಚ್ಚಿಗೆದ್ದ ಪೂಜಾರಿ ಮೊಬೈಲ್​ಅನ್ನು ಒಡೆದು ಹಾಕಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನಡೆದಿದೆ. ನಾನು ದೇವರು, ನನ್ನ ವಿಡಿಯೋವನ್ನು ನೀನು ಮಾಡುತ್ತಿದ್ದೀಯಾ ಎಂದು ಗದರಿದ ಪೂಜಾರಿ ರಂಗ ಮೊಬೈಲ್ ಅನ್ನು ಒಡೆದು ಹಾಕಿದ್ದಾನೆ.

ಮೆರವಣಿಗೆಯಲ್ಲಿ ನಾಗಿಣಿ ನೃತ್ಯ ಮಾಡುತ್ತಿರುವ ಪೂಜಾರಿ

ಗ್ರಾಮದಲ್ಲಿ ಓಕಳಿ ಹಬ್ಬದ ಮೆರವಣಿಗೆ ನಿಮಿತ್ತ ಪೂಜಾರಿ ರಂಗ ತನ್ನ ಮೇಲೆ ದೇವರ ಬಂದಿದೆ ಎಂದು ನಾಗರಹಾವಿನ ರೀತಿಯಲ್ಲಿ ನೃತ್ಯ ಮಾಡುತ್ತಿದ್ದ. ಈ ವೇಳೆ ಮೊಬೈಲ್​​ನಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ವ್ಯಕ್ತಿಯನ್ನು ನೋಡಿದ ಪೂಜಾರಿ, ನಾನು ದೇವರು, ನನ್ನ ಮೈಮೇಲೆ ದೇವರು ಬಂದಿದೆ. ನನ್ನ ವಿಡಿಯೋ ಮಾಡುತ್ತಿದ್ದಿಯಾ, ನಿನಗೆಷ್ಟು ಧೈರ್ಯ ಎಂದು ಗದರಿಸಿ ಆ ವ್ಯಕ್ತಿಯ ಮೊಬೈಲ್​​​​ ಅನ್ನು ಕಿತ್ತು ಎಸೆದಿದ್ದಾನೆ. ಇನ್ನು ಮೊಬೈಲ್ ಕಳೆದುಕೊಂಡ ವ್ಯಕ್ತಿ ಗ್ರಾಮದ ಮುಖಂಡರಿಗೆ ದೂರು ನೀಡಿದ್ದು ಮುಖಂಡರು ನಾಳೆ ಗ್ರಾಮದಲ್ಲಿ ಪಂಚಾಯತಿ ಏರ್ಪಡಿಸಿದ್ದಾರೆ.

Intro:ಮೈಸೂರು: ನಾನು ದೇವರು ನನ್ನ ವಿಡಿಯೋವನ್ನು ನೀನು ಮಾಡುತ್ತಿದ್ದೀಯ ಎಂದು ವ್ಯಕ್ತಿಯೊಬ್ಬರ ಮೊಬೈಲ್ ಅನ್ನು ಹೊಡೆದು ಹಾಕಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನಡೆದಿದೆ.Body:ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಹೋಕಳಿ ಹಬ್ಬದ ಮೆರವಣಿಗೆ ನಡೆಯುತ್ತಿತ್ತು.
ಆ ಸಂದರ್ಭದಲ್ಲಿ ದೇವರ ಪೂಜಾರಿ ರಂಗ ಎಂಬವನು ನನ್ನ ಮೇಲೆ ದೇವರ ಬಂದಿದೆ ಎಂದು ನಾಗರಹಾವಿನ ರೀತಿಯಲ್ಲಿ ನೃತ್ಯ ಮಾಡುತ್ತಿದ್ದ ಈ ಸಂದರ್ಭದಲ್ಲಿ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆಯಿಡಿಯುತ್ತಿದ್ದ ವ್ಯಕ್ತಿಯನ್ನು ನೋಡಿದ ಪೂಜಾರಿ ನಾನು ದೇವರು ನನ್ನ ಮೈ ಮೇಲೆ ದೇವರು ಬಂದಿದ್ದಾನೆ ನನ್ನ ವಿಡಿಯೋವನ್ನು ನೀನು ಮಾಡುತ್ತಿದ್ದಿಯಾ ನಿನಗೆಷ್ಟು ಧೈರ್ಯ ಎಂದು ಪೂಜಾರಿ ಆ ವ್ಯಕ್ತಿಯ ಮೊಬೈಲ್ ಅನ್ನು ಕಿತ್ತು ಎಸೆದಿದ್ದಾನೆ ಈ ಸಂಬಂಧ ಮೊಬೈಲ್ ಕಳೆದುಕೊಂಡ ವ್ಯಕ್ತಿ ಗ್ರಾಮದ ಮುಖಂಡರಿಗೆ ದೂರು ನೀಡಿದ್ದು ಮುಖಂಡರು ನಾಳೆ ಗ್ರಾಮದಲ್ಲಿ ಪಂಚಾಯತಿ ಏರ್ಪಡಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.