ಮಂಡ್ಯ : ದೇಶದ ಆರ್ಥಿಕ ಪುನಶ್ಚೇತನಕ್ಕೆ ಆತ್ಮನಿರ್ಭರ್ ಭಾರತ್ ಅಭಿಯಾನ ಸಂಜೀವಿನಿ ಇದ್ದಂತೆ ಇದನ್ನು ಯಶಸ್ವಿಗೊಳಿಸಲು ಜಿಲ್ಲಾ ಬಿಜೆಪಿ ಮುಖಂಡರು ಕಾರ್ಯಕರ್ತರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ತಿಳಿಸಿದರು.
ಕಾರ್ಮಿಕರ ಹಿತ ರಕ್ಷಣೆಗಾಗಿ ಕೇಂದ್ರ ಈ ಯೋಜನೆ ಜಾರಿಗೊಳಿಸಿದೆ. ಎಲ್ಲರಿಗೂ ವಸತಿ ಹಾಗೂ ಆಹಾರ ಪೂರೈಕೆಗೆ ಅವಕಾಶ ನೀಡಲಾಗಿದೆ. ಯಾವುದೇ ಗ್ಯಾರಂಟಿ ಇಲ್ಲದೇ ಮಧ್ಯಮ ಹಾಗೂ ಸಣ್ಣ ಉದ್ಯಮಗಳಿಗೆ ಒಂದು ಕೋಟಿ ಸಾಲ ನೀಡಲಾಗುತ್ತಿದೆ. 23 ಸಾವಿರ ಮಂದಿಗೆ ಯೋಜನೆಯ ಉಪಯೋಗ ಸಿಕ್ಕಿದೆ ಎಂದರು.
ಸಹಕಾರಿ ಬ್ಯಾಂಕುಗಳು ಪುನಶ್ಚೇತನ ಮಾಡಲು 30 ಸಾವಿರ ಕೋಟಿಯನ್ನು ಕೇಂದ್ರ ನೀಡಿದೆ. ಇದರಿಂದ ಸಣ್ಣ ಸಹಕಾರಿ ಬ್ಯಾಂಕ್‌ಗಳಿಗೆ ಉತ್ತೇಜನ ಸಿಕ್ಕಿದೆ. ಈಶಾನ್ಯ ರಾಜ್ಯಗಳ ವಿದ್ಯುತೀಕರಣ ಕೇಂದ್ರದ ಕೊಡುಗೆ ದೊಡ್ಡದು. 2023 ರೊಳಗೆ ದೇಶ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದರು.
ರಾಜ್ಯಕ್ಕೆ 6,100 ಕೋಟಿ ನೀಡಲಾಗಿದೆ. ಈ ಹಣದಲ್ಲಿ ದೊಡ್ಡ ಕೋವಿಡ್-19 ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚುತ್ತಿದೆ. ಉಸ್ತುವಾರಿಗಾಗಿ ಸಚಿವರನ್ನು ನೇಮಕ ಮಾಡಲಾಗುತ್ತಿದೆ. ಇದು ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಣ ಜೊತೆಗೆ ಆರ್ಥಿಕ ಪುನಶ್ಚೇತನಕ್ಕೆ ಕೈಗೊಂಡ ಕ್ರಮಗಳು ಎಂದರು.
ಪಿಎಂ ಕೇರ್ಸ್ಗೆ ದೇಣಿಗೆ ಸಂಗ್ರಹ : ಜಿಲ್ಲೆಯಿಂದ ಪಿಎಂ ಕೇರ್ಸ್ಗೆ ಸುಮಾರು 6.50 ಕೋಟಿ ರೂಪಾಯಿ ಸಂಗ್ರಹ ಮಾಡಿ ನೀಡಲಾಗಿದೆ. ಜೊತೆಗೆ ಬಡವರಿಗೂ ಆಹಾರ ಪದಾರ್ಥಗಳನ್ನು ನೀಡಲಾಗಿದೆ ಎಂದು ತಿಳಿಸಿದರು.