ಮಂಡ್ಯ: ದಾನಗಳಲ್ಲೇ ಶ್ರೇಷ್ಠ ದಾನ ನೇತ್ರದಾನ. ವೃದ್ಧೆಯೊಬ್ಬರು ಸಾವಿಗೀಡಾದ ನಂತರ ಕುಟುಂಬದ ಸದಸ್ಯರು ಆಕೆಯ ಕಣ್ಣನ್ನು ದಾನ ಮಾಡೋ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ನಗರದ ಸ್ವರ್ಣಸಂದ್ರದ ಲಲಿತಮ್ಮ(88) ಸಾವಿಗೀಡಾದ ನಂತರ ಆಕೆಯ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಈ ಮೂಲಕ ಲಲಿತಮ್ಮ ಪುತ್ರ ಕುಮಾರ್ ನಾರಾಯಣ್ ಹಾಗೂ ಕುಟುಂಬದ ಸದಸ್ಯರು ಇತರರಿಗೆ ಮಾದರಿಯಾಗುವ ನಿರ್ಧಾರ ಕೈಗೊಂಡಿದ್ದಾರೆ.
ಮೊದ ಮೊದಲು ಕುಟುಂಬದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಕೊನೆಗೆ ಎಲ್ಲರನ್ನೂ ಒಪ್ಪಿಸಿ ಕಣ್ಣುಗಳನ್ನು ದಾನ ಮಾಡಿದ್ದಾರೆ. ಎರಡೂ ಕಣ್ಣುಗಳನ್ನು ವೈದ್ಯರು ಸರಿಯಾದ ಸಮಯಕ್ಕೆ ವಶಕ್ಕೆ ಪಡೆದಿದ್ದಾರೆ. ಕುಟುಂಬದ ಈ ಸಾಮಾಜಿಕ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.