ETV Bharat / state

ಸುಮಲತಾ ಕಾಂಗ್ರೆಸ್ ಸೇರ್ಪಡೆ ಆಸೆಗೆ ಡಿಕೆಶಿ ಅಡ್ಡಿ: ನಾಲ್ಕು ವರ್ಷಗಳ ಹಿಂದಿನ ಗುಟ್ಟು ಬಿಚ್ಚಿಟ್ಟ ಸಂಸದೆ - ಶರತ್ ಬಚ್ಚೇಗೌಡ

ಕಾಂಗ್ರೆಸ್​ ಪಕ್ಷ ಸೇರ್ಪಡೆಗೆ ಅಡ್ಡಿಪಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್
ಸಂಸದೆ ಸುಮಲತಾ ಅಂಬರೀಶ್
author img

By

Published : Jan 12, 2023, 4:32 PM IST

ಸಂಸದೆ ಸುಮಲತಾ ಅಂಬರೀಶ್ ಅವರು ಮಾತನಾಡಿದರು

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ ಸಂಸದೆ ಸುಮಲತಾ ಪಕ್ಷ ಸೇರ್ಪಡೆ ವಿಚಾರ ಇನ್ನು ಪ್ರಶ್ನೆಯಾಗೇ ಉಳಿದಿದೆ. ಈ ನಡುವೆ ಕಾಂಗ್ರೆಸ್ ಸೇರಲು ನಡೆದಿದ್ದ ಪ್ರಯತ್ನ‌ಗಳ ಬಗ್ಗೆ ಸ್ವತಃ ಸುಮಲತಾ ಮಾತನಾಡಿದ್ದು, ಪಕ್ಷ ಸೇರ್ಪಡೆಗೆ ಅಡ್ಡಿಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್. ಬಿಜೆಪಿ ಅಸೋಸಿಯಟ್ ಮೆಂಬರ್ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು. ಏನನ್ನು ವಿಚಾರಿಸದೇ ಅವರ ಅಭಿಪ್ರಾಯ ಹೇಳುವುದು ತಪ್ಪು. ನಾನು ಎಂಪಿ ಆಗಿರುವ ಮೂರು ವರ್ಷದ ಅವಧಿಯಲ್ಲಿ ಡಿಕೆಶಿ ಜೊತೆ ಮಾತಾಡಿಲ್ಲ. ಒಂದು ಪಕ್ಷದ ರಾಜ್ಯಾಧ್ಯಕ್ಷ ಆದವರು ಜಿಲ್ಲೆಯಲ್ಲಿ ಏನು ಆಗುತ್ತಿದೆ ಎಂದು ತಿಳಿದುಕೊಂಡು ಮಾತಾಡಬೇಕು ಎಂದರು.

ನನ್ನ ಗಂಡ ಅಂಬರೀಶ್ ಅವರು 25 ವರ್ಷ ಕಾಂಗ್ರೆಸ್‌ನಲ್ಲಿ ಇದ್ದರು. ನಾನು ಆರಂಭದಲ್ಲಿ ನನ್ನ ಲೈಫ್‌ನಲ್ಲಿ ಮಂಡ್ಯಗೆ ಟಿಕೆಟ್ ಕೊಡಿ ಎಂದಿದ್ದು ಕಾಂಗ್ರೆಸ್‌ನನ್ನು. ಕಾಂಗ್ರೆಸ್‌ನ್ನು ಬಿಟ್ಟು ಬೇರೆ ಯಾವ ಪಕ್ಷದಿಂದ ಟಿಕೆಟ್ ಕೇಳಿರಲಿಲ್ಲ. ಅಂಬರೀಶ್ ಅವರಿಗೆ ಎಲ್ಲ ಪಕ್ಷದ ನಾಯಕರ ಜೊತೆ ಉತ್ತಮ ಒಡನಾಟ ಇತ್ತು. ನಾನು ಯಾರನ್ನು ಬೇಕಾದರೂ ಟಿಕೆಟ್ ಕೇಳ ಬಹುದಿತ್ತು. ನಾನು ಕೇಳಿದ್ದು ಕಾಂಗ್ರೆಸ್ ಪಕ್ಷವನ್ನು ಮಾತ್ರ. ಅಂಬರೀಶ್ ಅವರು ಇದ್ದ ಪಕ್ಷ ಎಂದು ಕಾಂಗ್ರೆಸ್‌ನ್ನು ಕೇಳಿದ್ದೆ. ಆ ಟೈಂನಲ್ಲಿ ಟಿಕೆಟ್ ಕೊಡಲ್ಲ ಎಂದಿದ್ದೆ ಡಿ. ಕೆ ಶಿವಕುಮಾರ್. ಮಂಡ್ಯ ಬೇಡ ನೀವು ಬೆಂಗಳೂರು ದಕ್ಷಿಣ ಅಥವಾ ಉತ್ತರದಲ್ಲಿ ನಿಂತುಕೊಳ್ಳಿ. ಮಂಡ್ಯದಲ್ಲಿ ತುಂಬಾ ಕಷ್ಟ ಆಗುತ್ತೆ, ಮಂಡ್ಯ ಆಗಲ್ಲ ಎಂದಿದ್ದು ಡಿಕೆಶಿ. ಈ ಮಾತನ್ನು ಅವರನ್ನು ಕೇಳಿ ಅವರು ಇದನ್ನು ಒಪ್ಪಿಕೊಳ್ಳಲೇಬೇಕು.

ಜನರ ಋಣವನ್ನು‌ ನಾನು ತೀರಿಸಬೇಕು.. ಅವರು ಟಿಕೆಟ್ ಕೊಡಲು ಆಗಲ್ಲ ಎಂದಿದ್ದಕ್ಕೆ ನಾನು ಪಕ್ಷೇತರವಾಗಿ ನಿಂತೆ. ಚಾಮುಂಡಿ ತಾಯಿ ಆಣೆ ನನಗೆ ಅನುಕೂಲ ಮಾಡಿಕೊಡಿ ಎಂದು ಯಾವ ಪಕ್ಷವನ್ನು ಕೇಳಿಕೊಂಡಿಲ್ಲ. ಪಕ್ಷೇತರವಾಗಿ ಗೆಲ್ಲಿಸಿದ ನನ್ನ ಜನರ ಋಣವನ್ನು‌ ನಾನು ತೀರಿಸಬೇಕು. ಆ ದಾರಿಯಲ್ಲಿ ನಾನು ನಡೆದುಕೊಂಡು ಹೋಗ್ತಾ ಇದೀನಿ. ಪಕ್ಷೇತರವಾಗಿ ಗೆದ್ದ ಶರತ್ ಬಚ್ಚೇಗೌಡರನ್ನು ಡಿಕೆಶಿ ಅಭಿನಂದನೆ ಮಾಡಿದ್ರು.

ಮಂಡ್ಯದಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಬೇಕು ಅಂದಿದ್ದರೆ ನನಗೂ ಅವರು ಅಭಿನಂದನೆ ಸಲ್ಲಿಸಬೇಕಿತ್ತು. ನನ್ನ ಉದ್ದೇಶ ಹಾಗೂ‌ ಮುಂದಿನ ನಡೆಯನ್ನು ಕೇಳಬೇಕಿತ್ತು. ಡಿಕೆಶಿಗೆ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಆಸೆ ಇದೆಯಾ ಎಂಬ ಅನುಮಾನ ನನಗೆ ಇದೆ. ನಾನು ಕಾಂಗ್ರೆಸ್ ಸೇರಬಾರದು ಎಂಬ ರೀತಿಯಲ್ಲಿ ಡಿ ಕೆ ಶಿವಕುಮಾರ್ ನಡೆದುಕೊಳ್ತಿದ್ದಾರೆ. ನನ್ನನ್ನು ಯಾರು ಸ್ವಾಗತಿಸುತ್ತಾರೋ ಅಲ್ಲಿಗೆ ನಾನು ಹೋಗುತ್ತೇನೆ. ನನಗೆ ಗೌರವ ಇಲ್ಲದ ಪಕ್ಷಕ್ಕೆ ನಾನು ಹೋಗಲ್ಲ ಎಂದರು.

ಬಿಜೆಪಿ ಸೇರ್ಪಡೆಯ ಬಗ್ಗೆ ಯೋಚನೆ ಮಾಡಿಲ್ಲ: ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಆದರೆ, ನಾನು ಬಿಜೆಪಿ ಸೇರ್ಪಡೆಯ ಬಗ್ಗೆ ಯೋಚನೆ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆ ವಿಚಾರ ಇಲ್ಲ. ಫ್ಲೆಕ್ಸ್​​ನಲ್ಲಿ ಅವರವರ ಅಭಿಮಾನಕ್ಕೆ ಫೋಟೋ ಹಾಕಿದ್ದಾರೆ ಅಷ್ಟೇ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಓದಿ: ನಾನು ಬಿಜೆಪಿ ಸೇರುವುದರ ಬಗ್ಗೆ ಯೋಚಿಸಿಲ್ಲ: ಸಂಸದೆ ಸುಮಲತಾ ಅಂಬರೀಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.