ETV Bharat / state

ಕೊನೆಗೂ ಕೆಆರ್​ಎಸ್​​ನಿಂದ ನಾಲೆಗಳಿಗೆ ಹರಿದ ನೀರು: ಖುಷಿಗೊಂಡ ರೈತರು

ನೀರಿನ ಸಂಗ್ರಹ ಕಡಿಮೆ ಹಿನ್ನೆಲೆಯಲ್ಲಿ ಹಾಲಿ ಬೆಳೆದಿರುವ ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಬಳಸುವಂತೆ ಸೂಚನೆ ನೀಡಲಾಗಿದೆ.

ಕೆಆರ್​​ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುಗಡೆ
author img

By

Published : Jul 16, 2019, 10:57 AM IST

ಮಂಡ್ಯ: ರೈತರ ನಿರಂತರ ಪ್ರತಿಭಟನೆಯ ನಂತರ ಕೊನೆಗೂ ಕೆಆರ್​​ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ರೈತರು ಹರ್ಷಗೊಂಡಿದ್ದಾರೆ.

ನಿನ್ನೆಯಷ್ಟೆ ರಾಜ್ಯ ಸರ್ಕಾರ ನೀರು ಬಿಡುವ ತೀರ್ಮಾನ ಪ್ರಕಟ ಮಾಡಿದ್ದು, ಅದರಂತೆ ಇಂದು ಅಣೆಕಟ್ಟೆಯಿಂದ ತಡರಾತ್ರಿಯಿಂದಲೇ ನೀರು ಬಿಡುಗಡೆ ಮಾಡಲಾಗಿದೆ. ಕೆಆರ್​​ಎಸ್ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಸುಮಾರು 2,500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ನಿನ್ನೆ ನಡೆದ ಐಸಿಸಿ ಸಭೆ ನಿರ್ಧಾರದಂತೆ ನೀರು ಬಿಡುಗಡೆ ಮಾಡಲಾಗಿದೆ.

ಕೆಆರ್​​ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುಗಡೆ

ಕಳೆದೊಂದು ತಿಂಗಳಿಂದ ನಿರಂತರವಾಗಿ ರೈತರು ಹೋರಾಟ ನಡೆಸುತ್ತಿದ್ದರು. ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸುವಂತೆ ಹೋರಾಟಗಾರರು ಮನವಿ ಮಾಡಿದ್ದರು. ಮಳೆ ಕೊರತೆ, ನೀರಿನ ಸಂಗ್ರಹ ಕಡಿಮೆ ಹಿನ್ನೆಲೆಯಲ್ಲಿ ಹಾಲಿ ಬೆಳೆದಿರುವ ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಬಳಸುವಂತೆ ಸೂಚನೆ ನೀಡಲಾಗಿದೆ.

ಹೊಸದಾಗಿ ಯಾವ ಬೆಳೆಯನ್ನೂ ಬೆಳೆಯದಂತೆ ತಾಕೀತು ಮಾಡಲಾಗಿದ್ದು, ಒಂದೊಮ್ಮೆ ಬೆಳೆ ಬೆಳೆದು ನಷ್ಟ ಅನುಭವಿಸಿದರೆ ಸರ್ಕಾರ ಹೊಣೆ ಅಲ್ಲ ಎಂದು ಹೇಳಿದೆ.

Intro:ಮಂಡ್ಯ: ಕೆ.ಆರ್.ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ. ನಿನ್ನೆಯಷ್ಟೇ ರಾಜ್ಯ ಸರ್ಕಾರ ನೀರು ಬಿಡುವ ತೀರ್ಮಾನ ಪ್ರಕಟ ಮಾಡಿತ್ತು. ಇಂದು ಅಣೆಕಟ್ಟೆಯಿಂದ ತಡರಾತ್ರಿಯಿಂದಲೇ ನೀರು ಬಿಡುಗಡೆ ಮಾಡಲಾಗಿದೆ.
ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಸುಮಾರು 2,500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ನಿನ್ನೆ ನಡೆದ ಐಸಿಸಿ ಸಭೆ ನಿರ್ಧಾರದಂತೆ ನೀರು ಬಿಡುಗಡೆ ಮಾಡಲಾಗಿದೆ.
ಕಳೆದೊಂದು ತಿಂಗಳಿಂದ ನಿರಂತರವಾಗಿ ರೈತರು ಹೋರಾಟ ನಡೆಸುತ್ತಿದ್ದರು. ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸುವಂತೆ ಹೋರಾಟಗಾರರು ಮನವಿ ಮಾಡಿದ್ದರು.
ಮಳೆ ಕೊರತೆ, ನೀರಿನ ಸಂಗ್ರಹ ಕಡಿಮೆ ಹಿನ್ನೆಲೆಯಲ್ಲಿ ಹಾಲಿ ಬೆಳೆದಿರುವ ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಬಳಸುವಂತೆ ಸೂಚನೆ ನೀಡಲಾಗಿದೆ.
ಹೊಸದಾಗಿ ಯಾವ ಬೆಳೆಯನ್ನೂ ಬೆಳೆಯದಂತೆ ತಾಕೀತು ಮಾಡಲಾಗಿದ್ದು, ಒಂದೊಮ್ಮೆ ಬೆಳೆ ಬೆಳೆದು ನಷ್ಟ ಅನುಭವಿಸಿದರೆ ಸರ್ಕಾರ ಹೊಣೆ ಅಲ್ಲ ಎಂದು ಹೇಳಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.