ಮಂಡ್ಯ : ವೀಕೆಂಡ್ ಕರ್ಫ್ಯೂಗೆ ಉತ್ತಮ ಬೆಂಬಲ ನೀಡಿದ್ದ ಮಂಡ್ಯ ಜನರು ಇಂದು ಯಥಾಸ್ಥಿತಿಯಾಗುತ್ತಿದ್ದಂತೆ ಕೋವಿಡ್ ನಿಯಮ ಗಾಳಿಗೆ ತೂರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯಗೊಂಡಿದೆ. ಎಂದಿನಂತೆ ವಾಹನಗಳ ಸಂಚಾರ ಆರಂಭಗೊಂಡಿವೆ. ಆದ್ರೆ, ಸಾರಿಗೆ ಬಸ್‌ಗಳು ಸೇರಿದಂತೆ ಖಾಸಗಿ ವಾಹನಗಳು ರಸ್ತೆಗಿಳಿಯುತ್ತಿದ್ದಂತೆ ತಮ್ಮ ತಮ್ಮ ಊರಿನತ್ತ ತೆರಳಿದ ಜನರು ಮುಗಿಬೀಳುತ್ತಿದ್ದಾರೆ.
2 ದಿನಗಳ ಕಾಲ ಸಂಪೂರ್ಣ ಸ್ತಬ್ಧವಾಗಿದ್ದ ಜಿಲ್ಲೆಯಲ್ಲಿ ಇದೀಗ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದು, ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 800 ಗಡಿ ದಾಟಿದೆ. ಆದರೂ ಸಹ ಜಿಲ್ಲೆಯ ಜನರು ಎಚ್ಚೆತುಕೊಳ್ಳದೆ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
ಜಿಲ್ಲಾಡಳಿತ ಕೊರೊನಾ ಕಡಿವಾಣಕ್ಕೆ ಜಿಲ್ಲಾದ್ಯಂತ 144 ನಿಯಮ ಜಾರಿಗೊಳಿಸಿದೆ. ಆದ್ರೆ ಜನರು ಯಾವುದಕ್ಕೂ ಭಯ ಪಡವೆ ಓಡಾಡುತ್ತಿದ್ದಾರೆ.