ETV Bharat / state

ನಿಮ್ಗೆ ಕಾಂಗ್ರೆಸ್ ಕಂಡ್ರೆ ಅಸಹ್ಯ ಅಲ್ವಾ, ದೂರಾನೇ ಇರಿ.. ಹೆಚ್‌ಡಿಕೆ ವಿರುದ್ಧ ನರೇಂದ್ರ ಸ್ವಾಮಿ ಕಿಡಿ

ಒಂದೂ ಕಾಲು ವರ್ಷ ಸಿಎಂ ಆಗಿದ್ರಲ್ಲಾ‌ ಏನು ನೀವು ಗೆದ್ದು ಆಗಿದ್ರಾ? ನಿಮಗೆ ಕಾಂಗ್ರೆಸ್ ಕಂಡರೆ ಅಸಹ್ಯ ಅಲ್ವಾ. ಕಾಂಗ್ರೆಸ್​ನಿಂದ ದೂರನೇ ಇರಿ ಸ್ವಾಮಿ. ನಿಮ್ಮ ತಂದೆಯನ್ನು ಪ್ರಧಾನಮಂತ್ರಿ ಮಾಡಿದ ಕಾಂಗ್ರೆಸ್ ಪಕ್ಷವನ್ನ ಎಷ್ಟು ಸಾರಿ ಹೀಯಾಳಿಸುತ್ತೀರಾ..

author img

By

Published : Jan 19, 2021, 4:27 PM IST

ನರೇಂದ್ರ ಸ್ವಾಮಿ
ನರೇಂದ್ರ ಸ್ವಾಮಿ

ಮಂಡ್ಯ : ಯಾವುದೋ ಬಿರುಗಾಳಿ ಬಂತು ಒಳ ಒಪ್ಪಂದವಾಯಿತು ಎಂದು ಕುಮಾರಸ್ವಾಮಿಯವರು ಹೇಳುತ್ತಿದ್ದಾರೆ. ಈ ಕುರಿತು ನಾನು ನೇರವಾಗಿ ಹೇಳ್ತೇನೆ ಅವರು ನಾಟಕವಾಡುತ್ತಿದ್ದಾರೆ ಎಂದು ಹೆಚ್​ಡಿಕೆ ವಿರುದ್ದ ಮಾಜಿ ಸಚಿವ ನರೇಂದ್ರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಚುನಾವಣೆಯಲ್ಲಿ ಗೆದ್ದವರಿಗೆ ಸನ್ಮಾನ ಮಾಡಿದ ಬಳಿಕ ಮಾತನಾಡಿದ ಅವರು, ಗುಬ್ಬಿಯ ಜೆಡಿಎಸ್ ಶಾಸಕ ವಾಸು ಹಾಗೂ ಜಿ ಟಿ ದೇವೇಗೌಡ ಅವರು ಏನು ಹೇಳಿಕೆ ಕೊಟ್ಟಿದ್ದಾರೆ ನೆನಪಿದಿಯಾ, ಕಳೆದ ಚುನಾವಣೆಯಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿದ್ವಿ ಎಂದು ಹೇಳಿದ ಮಾತನ್ನು ನೆನಪಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ನರೇಂದ್ರ ಸ್ವಾಮಿ

ಕಾಂಗ್ರೆಸ್‌ನವರು ನಿಮ್ಮ ಮನೆ ಬಾಗಿಲಿಗೆ ಬಂದಿದ್ದರಾ? ನಾವು ಬಿಜೆಪಿಯನ್ನು ತಪ್ಪಿಸಬೇಕೆಂದು ಬಂದ್ವಿ. ಸೋನಿಯಾ ಗಾಂಧಿ ಸೂಚನೆ ಮೇರೆಗೆ ನಮ್ಮ ಎಲ್ಲಾ ನಾಯಕರು ನಿಮ್ಮ ಮನೆಯ ಬಾಗಿಲಿಗೆ ಬಂದ್ರು. ಆದರೆ, ನೀವು ಎಷ್ಟು ಹಗುರವಾಗಿ ಕಾಣ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದೂ ಕಾಲು ವರ್ಷ ಸಿಎಂ ಆಗಿದ್ರಲ್ಲಾ‌ ಏನು ನೀವು ಗೆದ್ದು ಆಗಿದ್ರಾ? ನಿಮಗೆ ಕಾಂಗ್ರೆಸ್ ಕಂಡರೆ ಅಸಹ್ಯ ಅಲ್ವಾ. ಕಾಂಗ್ರೆಸ್​ನಿಂದ ದೂರನೇ ಇರಿ ಸ್ವಾಮಿ. ನಿಮ್ಮ ತಂದೆಯನ್ನು ಪ್ರಧಾನಮಂತ್ರಿ ಮಾಡಿದ ಕಾಂಗ್ರೆಸ್ ಪಕ್ಷವನ್ನ ಎಷ್ಟು ಸಾರಿ ಹೀಯಾಳಿಸುತ್ತೀರಾ ಎಂದು ಕಿಡಿಕಾರಿದರು.

ನಮ್ಮ ಪಕ್ಷದಲ್ಲಿ ನಮ್ಮವರೇ ನಂಬಿಕೆಗೆ ದ್ರೋಹ ಮಾಡಿ ಬೆನ್ನಿಗೆ ಚೂರಿ ಹಾಕಿದ ಜನ ಇದ್ದಾರೆ. ಕಳೆದ ಚುನಾವಣೆಯಲ್ಲಿ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ರಿ. ನಮಗೆ ತಡವಾಗಿ ಗೊತ್ತಾಯ್ತು. ಆ ಪುಣ್ಯಾತ್ಮರ ವಿಚಾರ ಎಂದು ಮೈತ್ರಿ ಸರ್ಕಾರದ ಬಗ್ಗೆ ಮಾಜಿ ಸಚಿವ ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.