ETV Bharat / state

ಮಂಡ್ಯದಲ್ಲಿ 2 ನೇ ಸುತ್ತಿನ ಪ್ರವಾಸ..  ಸಂಸದೆ ಸುಮಲತಾ ಅಂಬಿ ಇಂದು 200 ಕಿ.ಮೀ ಸಂಚಾರ!! - Sumalatha Ambarish News

ಚುಂಚನಗಿರಿಯ ಕಾಲಭೈರವನಿಗೆ ಪೂಜೆ ಸಲ್ಲಿಸುವ ಮೂಲಕ ಪ್ರವಾಸ ಆರಂಭ ಮಾಡಿದ್ದಾರೆ. ಬೆಳಗ್ಗೆ ಮಠಕ್ಕೆ ಭೇಟಿ ನೀಡಿ ಕಾಲಭೈರವನಿಗೆ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್, ನಂತರ ಚುಂಚಶ್ರೀ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು‌.

MP Sumalatha
ಸಂಸದೆ ಸುಮಲತಾ
author img

By

Published : May 10, 2020, 12:14 PM IST

Updated : May 10, 2020, 1:03 PM IST

ಮಂಡ್ಯ : ಕೊರೊನಾ ಸಂಕಷ್ಟಕ್ಕೊಳಗಾದವರ ಸಹಾಯಕ್ಕಾಗಿ ಸಂಸದೆ ಸುಮಲತಾ ಅಂಬರೀಶ್ ಜಿಲ್ಲೆಯಲ್ಲಿ ಎರಡನೇ ಸುತ್ತಿನ ಪ್ರವಾಸ ಕೈಗೊಂಡಿದ್ದಾರೆ.

ಇಂದು ಸುಮಾರು 200 ಕಿ.ಮೀ ದೂರ ಪ್ರವಾಸ ಮಾಡುತ್ತಿದ್ದಾರೆ. ಚುಂಚನಗಿರಿಯ ಕಾಲಭೈರವನಿಗೆ ಪೂಜೆ ಸಲ್ಲಿಸುವ ಮೂಲಕ ಪ್ರವಾಸ ಆರಂಭ ಮಾಡಿದ್ದಾರೆ. ಬೆಳಗ್ಗೆ ಮಠಕ್ಕೆ ಭೇಟಿ ನೀಡಿ ಕಾಲಭೈರವನಿಗೆ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್, ನಂತರ ಚುಂಚಶ್ರೀ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು‌.

ಸಂಸದೆ ಸುಮಲತಾ ಮಂಡ್ಯದಲ್ಲಿ 2 ನೇ ಸುತ್ತಿನ ಪ್ರವಾಸ

ಜಿಲ್ಲೆಯ ಪ್ರವಾಸ ಹಾಗೂ ಕೊರೊನಾ ಕುರಿತ ವಿಚಾರವಾಗಿ ಮಾತುಕತೆ ನಡೆಸಿದರು. ಸುಮಲತಾ ಅಂಬರೀಶ್ ನಾಗಮಂಗಲ ತಾಲೂಕಿನ ಸಾತೇನಹಳ್ಳಿ, ಕೆಆರ್‌ಪೇಟೆಯ ಸಾರಂಗಿ, ಜಾಗಿನಕೆರೆ, ಪಾಂಡವಪುರ ತಾಲೂಕಿನ ಬಿ ಕೊಡಗಹಳ್ಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

ಬೆಳಗ್ಗೆ ಆರಂಭವಾಗಿರುವ ಪ್ರವಾಸ ರಾತ್ರಿಯವರೆಗೂ ಮುಂದುವರೆಯಲಿದೆ. ನಿರ್ಗತಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಿದ್ದಾರೆ.

Last Updated : May 10, 2020, 1:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.