ETV Bharat / state

ಹಣಕಾಸು ವಿಚಾರವಾಗಿ ಶಾಸಕರ ಅಸಹಕಾರ; ಸಚಿವರ ಶಾಕಿಂಗ್ ಹೇಳಿಕೆ - ಮಂಡ್ಯ ಜಿಲ್ಲಾ ಸುದ್ದಿ

ಕೊರೊನಾ ವೈರಸ್​​​​ ನಿಯಂತ್ರಿಸಲು ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಜೆಡಿಎಸ್​​ ಶಾಸಕರ ಕೈಗೆ ಕೊಡದ ಕಾರಣಕ್ಕೆ ನಮ್ಮ ಜೊತೆ ಕೈಜೋಡಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸ್ಫೋಟಕ ಮಾಹಿತಿ ಹೊರಹಾಕಿದರು.

Mandya district in-charge minister Narayanagowda
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ
author img

By

Published : Jul 22, 2020, 1:00 PM IST

ಮಂಡ್ಯ: ಕೋವಿಡ್​-19ಗೆ ಬಂದ ಅನುದಾನದನ್ನು ಜೆಡಿಎಸ್ ಶಾಸಕರ ಕೈಗೆ ಕೊಡದ ಕಾರಣಕ್ಕೆ ನಮ್ಮ ಜೊತೆ ಕೈಜೋಡಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸ್ಫೋಟಕ ಮಾಹಿತಿ ಹೊರಹಾಕಿದರು.

ಮಾಧ್ಯಮಗಳ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ಕಮಲ ಅರಳಿದ ಕಾರಣಕ್ಕೆ ನೋವಿದೆ. ನನ್ನ ಜೊತೆ ಎಲ್ಲರೂ ಚೆನ್ನಾಗಿದ್ದಾರೆ. ಆ ಒಂದೆರಡು ಜನ ಬಿಟ್ಟು. ಅದಕ್ಕಾಗಿ ಅವರು ಆ ರೀತಿ ನಡೆದುಕೊಂಡು, ಟೀಕೆ ಮಾಡುತ್ತಿದ್ದಾರೆ. ಏಕಂದರೆ, ನಾನು ಅವರ ಕೈಗೆ ಹಣ ಕೊಡಬೇಕಿತ್ತಂತೆ. ಹೀಗಾಗಿ, ಅವರು ನಮ್ಮೊಂದಿಗೆ ಬೆರೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ‌ ಲೆಕ್ಕಪತ್ರದ ವಿಚಾರದಲ್ಲಿ ತಾವು ತಲೆಹಾಕಿಲ್ಲ. ಇನ್ನು ಶಾಸಕರ ಕೈಗೆ ಹಣಕೊಡಲು ಎಲ್ಲಿಂದ ಸಾಧ್ಯ ಎಂದು ಪ್ರಶ್ನಿಸಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ

ಯಾವಾಗ ಬೇಕಾದರೂ ಲೆಕ್ಕ ಕೇಳಲಿ ಕೊಡುತ್ತೇವೆ. ಅವರಿಂದ ಹಣದ ಬೇಡಿಕೆನೇ ಜಾಸ್ತಿ. ಏಕೆಂದರೆ ₹18 ಕೋಟಿ ದುಡ್ಡು ಬಂದಿದೆ. ಅದನ್ನು ಕೋವಿಡ್ ನಿರ್ವಹಣೆಗೆ ಮಾತ್ರ ಬಳಸಲು ತೀರ್ಮಾನವಾಗಿದೆ. ಅದನ್ನು ಬೇರೆ ಉದ್ದೇಶಕ್ಕೆ ಬಳಸಲ್ಲ. ಕೊಡಲು ಆಗಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.