ಮಂಡ್ಯ: ಕೊರೊನಾ ಬಗ್ಗೆ ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ. ಶೀತ ವಲಯದಲ್ಲಿ ಕೊರೊನಾ ಹೆಚ್ಚಾಗಿ ಹರಡುತ್ತದೆ. ನಮ್ಮಲ್ಲಿ ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುವುದರಿಂದ ವೈರಸ್ ಹರಡುವಿಕೆ ಪ್ರಮಾಣ ತುಂಬಾ ಕಡಿಮೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.
ದಕ್ಷಿಣ ಭಾರತ ಸಮಭಾಜಕ ವೃತ್ತಕ್ಕೆ ಹತ್ತಿರವಿರುವುದರಿಂದ ಕೋವಿಡ್ -19 ವೈರಸ್ ಹರಡುವುದು ಸುಲಭವಲ್ಲ. ಅದು ಶೀತ ಪ್ರದೇಶದಲ್ಲಿ ಹೆಚ್ಚು ಹರಡುತ್ತದೆ. ಚೀನಾ ವಸ್ತುಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಹುಳಿ ಹಣ್ಣುಗಳಾದ ನಿಂಬೆ, ಸೀಬೆ, ಕಿತ್ತಳೆಯನ್ನು ಹೆಚ್ಚಾಗಿ ಬಳಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕೋವಿಡ್-19ರ ಚಿಕಿತ್ಸೆಗಾಗಿ ಮಿಮ್ಸ್ನಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ. ಮಾಸ್ಕ್ ಉಪಯೋಗಿಸುವ ಅವಶ್ಯಕತೆ ತುಂಬಾ ಕಡಿಮೆ ಇದೆ. ಮಕ್ಕಳಿಗೆ ಬೇಗ ಪರೀಕ್ಷೆ ಮುಗಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.