ETV Bharat / state

ರಾಷ್ಟ್ರದ ಗಮನ ಸೆಳೆದ ಸಕ್ಕರೆ ನಾಡಿನ ರಾಜಕೀಯ ಸಮರ - ಮಂಡ್ಯದಲ್ಲಿ ವಿಜಯಮಾಲೆ ಯಾರ ಕೊರಳಿಗೆ? - undefined

ಒಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ, ಇನ್ನೊಂದೆಡೆ ಕನ್ನಡ ಚಂದನವನದಲ್ಲಿ ಅಚ್ಚಳಿಯದ ಛಾಪು ಮೂಡಿಸಿ ಅಮರರಾದ ನಟನ ಪತ್ನಿ. ಈ ಇಬ್ಬರ ರಾಜಕೀಯ ಸಮರ ರಾಜ್ಯವಷ್ಟೇ ಅಲ್ಲ, ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಹಳೆ ಮೈಸೂರು ಭಾಗದ ಪ್ರಮುಖ ಲೋಕಸಭಾ ಕ್ಷೇತ್ರ ಮಂಡ್ಯದ ರಾಜಕೀಯ ಚಿತ್ರಣ...

ಮಂಡ್ಯದಲ್ಲಿ ವಿಜಯಮಾಲೆ ಯಾರ ಕೊರಳಿಗೆ?
author img

By

Published : Apr 18, 2019, 3:59 AM IST

Updated : Apr 18, 2019, 7:06 AM IST

ಮಂಡ್ಯ: ಸಕ್ಕರೆ ನಾಡಿನ ಚುನಾವಣಾ ಚಿತ್ರಣ ಈ ಬಾರಿ ಸಂಪೂರ್ಣ ಬದಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ತಮ್ಮ ಪುತ್ರ, ಚಿತ್ರನಟ ನಿಖಿಲ್‌ ಅವರನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಇನ್ನೊಂದೆಡೆ ಮಂಡ್ಯದ ಗಂಡು ಅಂಬರೀಶ್ ಪತ್ನಿ ಸುಮಲತಾ ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯದೆ ಪಕ್ಷೇತರರಾಗಿ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಡಿ ಇಟ್ಟರು. ಈ ಇಬ್ಬರೂ ಜಿಲ್ಲೆಯಾದ್ಯಂತ ನಡೆಸಿದ ಮತಬೇಟೆಯ ಅಬ್ಬರ, ಆರೋಪ ಪ್ರತ್ಯಾರೋಪಗಳನ್ನೆಲ್ಲಾ ಇಡೀ ರಾಜ್ಯವೇ ಬೆರಗುಗಣ್ಣಿನಿಂದ ನೋಡಿದೆ. ಇವತ್ತು ಇಬ್ಬರ ರಾಜಕೀಯ ಹಣೆಬರಹವನ್ನು ಮಂಡ್ಯದ ಮತದಾರರು ಬರೆಯಲಿದ್ದಾರೆ.

ಅಭ್ಯರ್ಥಿಗಳ ಚಿತ್ರಣ:

ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ 31 ರ ಹರೆಯದ ನಿಖಿಲ್‌ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ರಾಜಕೀಯಕ್ಕೆ ಧುಮುಕಿದ್ದಾರೆ. ಪ್ರಭಾವಿ ದೇವೇಗೌಡರ ಕುಟುಂಬ, ಕಾಂಗ್ರೆಸ್‌ ಘಟಾನುಘಟಿ ನಾಯಕರುಗಳ ಬೆಂಬಲ ಹಾಗೂ ಪಕ್ಷದ ಬೆಂಬಲದ ಹಿನ್ನೆಲೆಯಲ್ಲಿ ಅವರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ, ಸುಮಲತಾ ಅಂಬರೀಶ್‌ ಅವರಿಗೆ 'ಅಂಬಿ' ಹೆಸರೇ ನಾಮಬಲ. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಸುಮಲತಾ ಪರ ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಯಶ್, ದರ್ಶನ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್ ಬೆಂಬಲ ಸೂಚಿಸಿ ಅಬ್ಬರದ ಮತಪ್ರಚಾರ ನಡೆಸಿದ್ದಾರೆ.

ಮಂಡ್ಯದಲ್ಲಿ ವಿಜಯಮಾಲೆ ಯಾರ ಕೊರಳಿಗೆ?

ಕಣದಲ್ಲಿ 20 ಮಂದಿ ಪಕ್ಷೇತರರು:
ಇನ್ನು ಮಂಡ್ಯದಿಂದ ಲೋಕಸಭೆ ಪ್ರವೇಶ ಬಯಸಿ 20 ಮಂದಿ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇವರಲ್ಲಿ ನಾಲ್ವರು ಸುಮಲತಾ ಎಂಬ ಹೆಸರಿನ ಅಭ್ಯರ್ಥಿಗಳಿರುವುದು ವಿಶೇಷವಾಗಿದೆ.

ಮತದಾರರ ವಿವರ:

ಜಿಲ್ಲೆಯಲ್ಲಿ ಒಟ್ಟು 17,12,012 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಮಹಿಳೆಯರು: 8,56,285
ಪುರುಷರು: 8,54,758
ಸೇವಾ ಮತದಾರರು: 822
ಇತರೆ: 147

ಮಂಡ್ಯ ಸೂಕ್ಷ್ಮ ಮತ ಕ್ಷೇತ್ರವಾಗಿರುವುದರಿಂದ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮೂವರು‌ ಎಸ್‌ಪಿ ಮಟ್ಟದ ಅಧಿಕಾರಿಗಳು ಸೇರಿದಂತೆ ಪೊಲೀಸ್ ತುಕಡಿಗಳು, ಸಿಆರ್‌ಪಿಎಫ್ ಯೋಧರನ್ನು ನೇಮಕ ಮಾಡಲಾಗಿದೆ.

Intro:Body:

1 mandya election spl.txt   

close

Conclusion:
Last Updated : Apr 18, 2019, 7:06 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.