ಮಂಡ್ಯ: ಪುಲ್ವಾಮಾ ದಾಳಿಯ ಹುತಾತ್ಮ ಯೋಧ ಗುರು ಗ್ರಾಮಕ್ಕೆ ಉಡಿಗೆರೆಗೆ ಮದ್ದೂರು ತಹಶಿಲ್ದಾರ್ ಗೀತಾ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗುರು ಅವರ ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯಗೆ ಆತ್ಮಸ್ಥೈರ್ಯ ತುಂಬಿದರು.
ಗುರು ತಂದೆ ಹೊನ್ನಯ್ಯ ಜೊತೆ ಮಾತನಾಡಿದ ತಹಶಿಲ್ದಾರ್ ಗೀತಾ, ನಿಮ್ಮ ಮಗನ ಸಾವು ದೊಡ್ಡದು. ಅವರು ದೇಶಕ್ಕಾಗಿ ಮಡಿದಿದ್ದಾರೆ. ಹೆಮ್ಮೆ ಇರಲಿ ಎಂದು ಸಮಾಧಾನ ಮಾಡಿದರು. ಶೀಘ್ರವೇ ಪಾರ್ಥಿವ ಶರೀರ ತರಿಸುವ ಭರವಸೆ ನೀಡಿ, ಧೈರ್ಯದಿಂದ ಇರುವಂತೆ ಹೇಳಿದರು.
ಸಂಸ್ಕಾರಕ್ಕೆ ಸ್ಥಳ ನೀಡುವ ಭರವಸೆ: ತಹಶಿಲ್ದಾರ್ ಸಮಾಧಾನ ಮಾಡುತ್ತಿದ್ದಾಗ ಗ್ರಾಮಸ್ಥರು, ಸಂಸ್ಕಾರಕ್ಕೆ ಜಾಗವಿಲ್ಲ, ವ್ಯವಸ್ಥೆ ಮಾಡಿ ಅಂತ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ತಹಶಿಲ್ದಾರ್ ಸ್ಥಳ ಗುರುತಿಸುವುದಾಗಿ ಭರವಸೆ ನೀಡಿದರು.