ETV Bharat / state

ಸ್ವಾಭಿಮಾನಿ ಮಂಡ್ಯ ಅಂತಾ ಚುನಾವಣೆ ಗೆದ್ದವರ ಬಳಿ ಹೋಗಿ ಅಂದ್ರೆ ಜನ ಕೇಳ್ತಿಲ್ಲ: ಹೆಚ್​ಡಿಕೆ  ​ - Sumalata Kumaraswamy fight

ಸಂಸದೆ ಸುಮಲತಾ ವಿರುದ್ಧ ಪರೋಕ್ಷವಾಗಿ ಮಾಜಿ ಸಿಎಂ ಹೆಚ್​ಡಿಕೆ ಟೀಕೆ- ವೋಟ್​ ಹಾಕಿದ ಮತದಾರರು ನೋವು ತೋಡಿಕೊಳ್ತಾರೆ- ಇದು ಪರಿಸ್ಥಿತಿ ಎಂದು ಮಾಜಿ ಸಿಎಂ ಟೀಕೆ

HD Kumaraswamy
ಹೆಚ್​.ಡಿ ಕುಮಾರಸ್ವಾಮಿ
author img

By

Published : Jul 27, 2022, 1:32 PM IST

ಮಂಡ್ಯ: ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ವಿರುದ್ಧ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

''ಈ ಹಿಂದೆ ಮಂಡ್ಯದಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು. ಅವರು ಸ್ವಾಭಿಮಾನಿ ಮಂಡ್ಯ ಚುನಾವಣೆ ಅಂತ ಮತ ಕೇಳಿದ್ರು. ನಿಮ್ಮ ಕಷ್ಟ ಹೇಳಿಕೊಂಡು ನನ್ನ ಹತ್ತಿರ ಬರುತ್ತೀರಲ್ವಾ, 'ಸ್ವಾಭಿಮಾನಿ' ಅನ್ನೋವ್ರ ಬಳಿ ಒಂದು ಬಾರಿ ಹೋಗಿ ಬನ್ನಿ ಅಂತ ಜನರಲ್ಲಿ ಹೇಳಿದ್ದೆ. ಆದರೆ ಜನರು ನಾವು ನಿಮಗೆ ವೋಟ್ ಹಾಕಿದ್ದೇವೆ, ಅವರ ಬಳಿ ಹೋಗುವುದಿಲ್ಲ ಎನ್ನುತ್ತಾರೆ. ನಾನು ಇದಕ್ಕೆ ಉತ್ತರ ಕೊಡಲು ಆಗಲ್ಲ, ಇದು ನಮ್ಮ ಪರಿಸ್ಥಿತಿ'' ಎಂದು ಸಂಸದೆ ಸುಮಲತಾ ವಿರುದ್ಧ ಹೆಚ್​ಡಿಕೆ ನಯವಾಗಿಯೇ ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ

ದುಡ್ಡು ಖರ್ಚು ಮಾಡಿದರೆ ಜನ ವೋಟ್ ಹಾಕುತ್ತಾರೆ ಅನ್ನೋ ಶೋಕಿ ಬಹಳ ಜನಕ್ಕಿದೆ. ನಾನು ಹೆಸರು ಹೇಳುವುದಿಲ್ಲ, ಅಂಥವರು ಇಲ್ಲಿ ಇದ್ದಾರೆ. ಆದರೆ ದುಡಿಮೆ ಮಾಡುವವರನ್ನು ಎಂದಿಗೂ ಕಡೆಗಣಿಸಬೇಡಿ ಎಂದು ಕೇಳಿಕೊಂಡರು.

ಹೆಚ್​ ಡಿ ದೇವೇಗೌಡರ ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ಶಕ್ತಿ ಕೊಟ್ಟಿರುವುದು ಮಂಡ್ಯ ಜನತೆ. ಮಂಡ್ಯ ಜನರನ್ನು ನಮ್ಮ ಹೃದಯದಲ್ಲಿಟ್ಟುಕೊಂಡಿದ್ದೇವೆ. ಈ ಜಿಲ್ಲೆಯ ಜನ ಕಷ್ಟ ಅಂತ ಹೇಳಿದ್ರೆ, ನಾನು ಎಲ್ಲೂ ಸಹ ನಿರಾಸೆ ಮಾಡಿ ಕಳುಹಿಸಿಲ್ಲ. ಇಂದು ಮಂಡ್ಯ ಜಿಲ್ಲೆಯೊಂದಕ್ಕೆ ಸಾಲ ಮನ್ನಾ ಯೋಜನೆಯಲ್ಲಿ 600 ರಿಂದ 700 ಕೋಟಿ ಕೊಟ್ಟಿದ್ದೇವೆ. ಇದು ಮಂಡ್ಯಕ್ಕೆ ನಾವು ಕೊಟ್ಟ ಕೊಡುಗೆ ಎಂದರು.

ಶಾಸಕ ಡಿ ಸಿ ತಮ್ಮಣ್ಣ ಚುನಾವಣೆಗೆ ನಿಲ್ಲಲ್ಲ ಎನ್ನುತ್ತಿದ್ದರು. ಆ ಸಂದರ್ಭದಲ್ಲಿ ನಮ್ಮ ಮುಗ್ಧ ಜನರು ಬಲಿಯಾಗುವುದು ಬೇಡ ಅಂತ ಹೇಳಿ ಚುನಾವಣೆಗೆ ನಿಲ್ಲಲು ಮನವಿ ಮಾಡಿದ್ದೆ. ನಿಮ್ಮನ್ನು ನಂಬಿ ತಮ್ಮಣ್ಣ ಕೆಲಸ ಮಾಡಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದು ಹೆಚ್​ಡಿಕೆ ಹೇಳಿದ್ರು.

ಇದನ್ನೂ ಓದಿ: Praveen murder case.. ಕೇರಳಕ್ಕೆ ಹೋಗಿ ಆರೋಪಿಗಳನ್ನು ಬಂಧಿಸುವಂತೆ ಸಿಎಂ ಸೂಚನೆ

ನಾನು ಎರಡು ಬಾರಿ ಸಿಎಂ ಆಗಿದ್ದೇನೆ. ಇನ್ನೊಂದು ಬಾರಿ ಅಧಿಕಾರ ಕೊಡಿ ಅನ್ನೋದು ನಮ್ಮ ಸ್ವಾರ್ಥಕ್ಕಲ್ಲ. ನಾಡಿನ ಸಮಸ್ಯೆಗಳನ್ನು ಬಗೆಹರಿಸೋ ಸಲುವಾಗಿ ಅಷ್ಟೇ. ನಮ್ಮ ಕೈಯಿಂದ ಕೊಡುವ ಪರಿಸ್ಥಿತಿ ಇಲ್ಲ. ಸಾಲ-ಸೋಲ ಮಾಡಿದ್ದೇವೆ. ಹೇಳಿಕೊಳ್ಳಲಾಗಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.