ಮಂಡ್ಯ: ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಜಿ. ಮಾದೇಗೌಡ ನಿನ್ನೆ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಜಿಲ್ಲೆ ಮದ್ದೂರು ತಾಲೂಕಿನ ಹನುಮಂತನಗರದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಮಾದೇಗೌಡರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಾದೇಗೌಡರ ಚಿತೆಗೆ ಪುತ್ರ ಡಾ. ಪ್ರಕಾಶ್ ಅಗ್ನಿಸ್ಪರ್ಶ ಮಾಡಿದರು. ಇದೇ ವೇಳೆ ಜಿಲ್ಲಾಡಳಿತದಿಂದ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸೂಚಿಸಲಾಯಿತು. ಮಾದೇಗೌಡರ ಪತ್ನಿ ಪದ್ಮಾ ಅವರಿಗೆ ತ್ರಿವರ್ಣಧ್ವಜ ಹಸ್ತಾಂತರಿಸಲಾಯಿತು.
ಅಂತ್ಯಕ್ರಿಯೆಗೂ ಮೊದಲು ಸಾರ್ವಜನಿಕ ದರ್ಶನ:
ಮಾದೇಗೌಡ ಪಾರ್ಥಿವ ಶರೀರವನ್ನು ಕೆ.ಎಂ.ದೊಡ್ಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಜಿ.ಮಾದೇಗೌಡರ ಕುಟುಂಬಸ್ಥರು ಪೂಜೆ, ಅಂತಿಮ ನಮನ ಸಲ್ಲಿಸಿ ಆತ್ಮಲಿಂಗೇಶ್ವರ ದೇವಸ್ಥಾನದ ಸಮೀಪ ಅಂತ್ಯಕ್ರಿಯೆ ನೆರವೇರಿದ್ದು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ಜಿಲ್ಲಾಧಿಕಾರಿ ಅಶ್ವತಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
![Former MP Madegowda funeral completed in Mandya](https://etvbharatimages.akamaized.net/etvbharat/prod-images/kn-mnd-18-06-madegowda-panchabhoothadali-lina-avb-ka10026_18072021191951_1807f_1626616191_276.jpg)
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಂಸದ ಜಿ.ಮಾದೇಗೌಡ ಶನಿವಾರ ವಿಧಿವಶರಾಗಿದ್ದರು.
ಓದಿ: ಮಾಜಿ ಸಂಸದ ಮಾದೇಗೌಡ ವಿಧಿವಶ: ಇಂದು ನಡೆಯಲಿರುವ ಅಂತ್ಯಕ್ರಿಯೆ
ಮರೆಯಾದ 'ಕಾವೇರಿ ಪುತ್ರ' : ಮಾದೇಗೌಡರ ಜೀವನ, ಹೋರಾಟದ ಹಾದಿ
ರೈತಪರ ಹೋರಾಟಗಾರ ಮಾದೇಗೌಡ ನಿಧನ : ಬಿಎಸ್ವೈ, ದೇವೇಗೌಡ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ