ETV Bharat / state

ನೀರಿಗಾಗಿ ನಾಳೆಯಿಂದ ಮತ್ತೆ ಮಂಡ್ಯ ರೈತರ ಹೋರಾಟ: ಹೆದ್ದಾರಿ ಬಂದ್ ಸಾಧ್ಯತೆ

ಹೋರಾಟ ಮಾಡಿದ್ರು ಸರ್ಕಾರ ಮಂಡ್ಯಕ್ಕೆ ನೀರು ಬಿಡದ ಹಿನ್ನೆಲೆ ರೈತ ಮುಖಂಡ ದರ್ಶನ್​ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಇಂದು ಸಭೆ ನಡೆಸಿ ಜಿಲ್ಲೆಯಾದ್ಯಂತ ಹೋರಾಟ ಮಾಡಲು ನಿರ್ಧರಿಸಲಾಗಿದೆ.

author img

By

Published : Jun 30, 2019, 5:48 PM IST

ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಭೆ

ಮಂಡ್ಯ: ಹೋರಾಟ ಮಾಡಿದರೂ ಸರ್ಕಾರ ನೀರು ಬಿಡದ ಹಿನ್ನೆಲೆಯಲ್ಲಿ ರೈತರು ಹೊಸ ಹೋರಾಟಕ್ಕೆ ಮುಂದಾಗಿದ್ದಾರೆ. ರಾಜ್ಯಪಾಲರ ಭೇಟಿ ಹಾಗೂ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಳಿಸಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ.

ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ನಾಲೆಗೆ ನೀರು ಕೊಡಿಸುವ ವಿಚಾರವಾಗಿ ಮುಂದಿನ ಚಳವಳಿಗಳ ಕುರಿತು ಚರ್ಚೆ ಮಾಡಲಾಯಿತು. ಸೋಮವಾರದಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ, ಕಾವೇರಿ ಪ್ರಾಧಿಕಾರದ ಎದುರು ರಾಜ್ಯ ಸರ್ಕಾರ ಸ್ಥಳೀಯ ರೈತರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸದೇ ಇರುವುದರಿಂದ ಕಾನೂನಿನ ಮೊರೆ ಹೋಗುವುದು, 500 ಜನ ರೈತರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು, ಜಿಲ್ಲಾ ಬಂದ್​ಗೆ ಕರೆ ನೀಡುವುದು, ತಾಲೂಕು ಹೆದ್ದಾರಿಗಳನ್ನು ಬಂದ್ ಮಾಡುವುದು, ಗ್ರಾಮ ಪಂಚಾಯತ್​ ಬಂದ್ ಮಾಡುವುದು ಈ ಎಲ್ಲ ವಿಷಯಗಳ ಕುರಿತು ಸಭೆಯಲ್ಲಿ ನಿರ್ಧರಿಸಲಾಗಿದೆ.

ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಭೆ

ಪ್ರಗತಿಪರ ಸಂಘಟನೆಗಳು, ಆಟೋ ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರ ಸಂಘ ಸೇರಿದಂತೆ ಎಲ್ಲಾ ಸಂಘಟನೆಗಳ ಬೆಂಬಲ ಪಡೆದು ಹೋರಾಟಕ್ಕಿಳಿಯಲು ರೈತ ಸಂಘದವರು ತೀರ್ಮಾನಿಸಿದ್ದಾರೆ.

Intro:ಮಂಡ್ಯ: ಹೋರಾಟ ಮಾಡಿದರೂ ಸರ್ಕಾರ ನೀರು ಬಿಡದ ಹಿನ್ನಲೆಯಲ್ಲಿ ರೈತರು ಹೊಸ ಹೋರಾಟಕ್ಕೆ ಮುಂದಾಗಿದ್ದಾರೆ. ರಾಜ್ಯಪಾಲರ ಭೇಟಿ ಹಾಗೂ ಜಿಲ್ಲಾದ್ಯಂತ ಹೋರಾಟ ತೀರ್ವಗೊಳಿಸಲು ಇಂದು ಸಭೆ ಮಾಡಿ ನಿರ್ಧಾರ ಮಾಡಿದ್ದಾರೆ.
ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ನಾಲೆಗೆ ನೀರು ಕುಡಿಸುವ ವಿಚಾರವಾಗಿ ಮುಂದಿನ ಚಳವಳಿಗಳ ಕುರಿತು ಚರ್ಚೆ ಮಾಡಲಾಯಿತು.
ಸಭೆಯಲ್ಲಿ ಸೋಮವಾರದಿಂದ ಜಿಲ್ಲಾದ್ಯಂತ ಪ್ರತಿಭಟನೆ,
ಕಾವೇರಿ ಪ್ರಾಧಿಕಾರದ ಎದುರು ರಾಜ್ಯ ಸರ್ಕಾರ ಸ್ಥಳೀಯ ರೈತರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸದೇ ಇರುವುದರಿಂದ ಕಾನೂನು ಮೊರೆ ಹೋಗುವುದು, 500 ಜನ ರೈತರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು ಹಾಗೂ ಜಿಲ್ಲಾ ಬಂದ್ ಕರೆ ನೀಡುವುದು,
ತಾಲ್ಲೂಕು ಹೆದ್ದಾರಿಗಳನ್ನು ಬಂದ್ ಮಾಡುವುದು,
ಗ್ರಾಮ ಪಂಚಾಯಿತಿ ಬಂದ್ ಮಾಡುವುದು ಹಾಗೂ ಈ ಪ್ರತಿಭಟನೆ ಮುಂದುವರಿಸಲು ನಿರ್ಧಾರ ಮಾಡಲಾಯಿತು‌.
ಪ್ರಗತಿಪರ ಸಂಘಟನೆಗಳು, ಆಟೋ ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರ ಸಂಘ ಸೇರಿದಂತೆ ಎಲ್ಲಾ ಸಂಘಟನೆಗಳು ಬೆಂಬಲ ಪಡೆದು ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ.Body:ಬೈಟ್: ದರ್ಶನ್ ಪುಟ್ಟಣ್ಣಯ್ಯ, ರೈತ ಮುಖಂಡConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.