ಮಂಡ್ಯ: ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ವೃದ್ಧೆ, ನೀರಿನಲ್ಲಿ ವ್ಯಕ್ತಿ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದು ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡ ಘಟನೆ ನಡೆದಿದೆ.
ರಾಮನಗರ ಮೂಲದವಳೆಂದು ಸ್ಥಳೀಯರ ಬಳಿ ಪರಿಚಯ ಮಾಡಿಕೊಂಡಿದ್ದ ವೃದ್ಧೆ ಶ್ರೀರಂಗಪಟ್ಟಣದ ಸಂಗಮದಲ್ಲಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದಳಂತೆ. ಆದರೆ ನೀರಿನಲ್ಲಿ ವ್ಯಕ್ತಿ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಭಯಗೊಂಡು ಮನಸ್ಸು ಬದಲಾಯಿಸಿದ್ದಾಳೆ. ಸ್ಥಳದಲ್ಲಿದ್ದ ವೃದ್ಧೆಯನ್ನು ಕಂಡ ಪೊಲೀಸರು ವಿಚಾರಿಸಿದಾಗ ತಡವರಿಸುತ್ತಾ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ವಿಷಯ ತಿಳಿಸಿದ್ದಾಳೆ.
ವೃದ್ಧೆಯನ್ನು ಸಂತೈಸಿ ಪೊಲೀಸರು ಠಾಣೆಗೆ ಕರೆ ತಂದು ವಿಚಾರಿಸಿದ್ದಾರೆ. ವೃದ್ಧೆಯ ಬಳಿ 250 ಗ್ರಾಂ ಚಿನ್ನದ ಒಡವೆಗಳಿದ್ದು, ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ವೃದ್ಧೆ ಶ್ರೀರಂಗಪಟ್ಟಣ ಪೊಲೀಸರ ವಶದಲ್ಲಿದ್ದಾಳೆ.