ಮಂಡ್ಯ: ಬೀದಿ ನಾಯಿಗಳ ದಾಳಿಗೆ ಅಪರೂಪದ ಜಿಂಕೆ ಸಾವಿಗೀಡಾದ ಘಟನೆ ಪಾಂಡವಪುರ ತಾಲೂಕಿನ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.
ಮೇಲುಕೋಟೆಯ ರಾಯಗೋಪುರದ ಕಡೆಯಿಂದ ನಾಯಿಗಳ ಹಿಂಡು ಜಿಂಕೆಯ ಮೇಲೆ ದಾಳಿ ಮಾಡಿ ದೇವಾಲಯದ ಬಳಿಗೆ ಎಳೆದು ತಂದಿವೆ. ಜಿಂಕೆಯನ್ನು ನಾಯಿಗಳಿಂದ ಸ್ಥಳೀಯರು ಬಿಡಿಸುವಷ್ಟರಲ್ಲಿ ಜಿಂಕೆಯ ಪ್ರಾಣ ಹಾರಿಹೋಗಿತ್ತು.
ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಲಾಗಿದ್ದು, ಸಾವಿಗೀಡಾದ ಜಿಂಕೆಯನ್ನು ವಶಕ್ಕೆ ಪಡೆದುಕೊಂಡು ಸರ್ಕಾರಿ ನಿಯಮಗಳಂತೆ ಕ್ರಮ ಕೈಗೊಳ್ಳಲಿದ್ದಾರೆ.