ETV Bharat / state

ಮಂಡ್ಯ: ಕೊರೊನಾ ವಾರ್ಡ್​ನಲ್ಲಿ ಮೃತದೇಹಗಳ ನಡುವೆಯೇ ಸೋಂಕಿತರಿಗೆ ಚಿಕಿತ್ಸೆ!

author img

By

Published : May 8, 2021, 12:28 PM IST

Updated : May 8, 2021, 12:40 PM IST

ಮಂಡ್ಯ ಜಿಲ್ಲೆಯಲ್ಲೂ ಕೊರೊನಾ ಆರ್ಭಟಿಸುತ್ತಿದೆ. ಕೊರೊನಾ ವಾರ್ಡ್​ನಲ್ಲಿ ಮೃತದೇಹಗಳ ನಡುವೆಯೇ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಿಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ.

Covid dead bodies in Corona patients ward in Mandya
ಮಂಡ್ಯದಲ್ಲಿ ಕೊರೊನಾ ವಾರ್ಡ್​ನಲ್ಲಿ ಮೃತದೇಹಗಳ ನಡುವೆಯೇ ಸೋಂಕಿತರಿಗೆ ಚಿಕಿತ್ಸೆ

ಮಂಡ್ಯ: ಕೊರೊನಾ ವಾರ್ಡ್​ನಲ್ಲೇ ಮೃತರ ಶವಗಳನ್ನಿರಿಸಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದ್ದು, ಇತರ ಸೋಂಕಿತರು ಭಯ ಭೀತರಾಗಿದ್ದಾರೆ.

ಮೃತದೇಹಗಳ ನಡುವೆಯೇ ಸೋಂಕಿತರಿಗೆ ಚಿಕಿತ್ಸೆ

ಕೋವಿಡ್ ಸೋಂಕಿತರಿಗೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಆ ಚಿಕಿತ್ಸೆ ಫಲಕಾರಿಯಾಗದೆ ವಾರ್ಡ್​ನಲ್ಲಿಯೇ ಸಾವಿಗೀಡಾಗಿದ್ದ ಇಬ್ಬರ ಶವಗಳನ್ನ ಹಲವು ಗಂಟೆಗಳ ಕಾಲ ವಾರ್ಡ್​ನಲ್ಲೇ ಇರಿಸಿದ್ದು, ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿ: ಒಂದೇ ಗ್ರಾಮದ 185 ಜನರಿಗೆ ಕೊರೊನಾ ದೃಢ.. ಕಾಶಿಯಿಂದ ಮರಳಿದವರು ಕೊಡಗಹಳ್ಳಿಗೆ ಕೋವಿಡ್ ತಂದ್ರಾ​!?

ಶವಗಳ ನಡುವೆಯೇ ವಾರ್ಡ್‌ನಲ್ಲಿದ್ದ ಸೋಂಕಿತರು ವಾಸಿಸುವಂತಾಗಿದೆ. ಭಯದಿಂದ ಸೋಂಕಿತರು ಆಸ್ಪತ್ರೆಯಿಂದ ಬೇರೆ ಕಡೆ ಶಿಫ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ.

ಅಲ್ಲದೇ ಸೋಂಕಿತರು ಮರಣ ಹೊಂದಿದ ಕೂಡಲೇ ಶವ ಬೇರೆಡೆಗೆ ಸಾಗಿಸುವಂತೆ ತಾಲೂಕು ಆಡಳಿತಕ್ಕೆ ಕೋವಿಡ್ ಸೋಂಕಿತರು ಮನವಿ ಮಾಡಿದ್ದಾರೆ.

Last Updated : May 8, 2021, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.