ETV Bharat / state

ಬಿಜೆಪಿಯಿಂದ ಮಾತ್ರವೇ ಸಮಗ್ರ ಅಭಿವೃದ್ಧಿ: ವಿಜಯೇಂದ್ರ ಬಣ್ಣನೆ - ಬಿ ವೈ ವಿಜಯೇಂದ್ರ

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶ ಆಯೋಜನೆ - ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ರಣತಂತ್ರಕ್ಕೆ ಮುಂದಾದ ಬಿಜೆಪಿ - ಬಿಜೆಪಿ ಮುಖಂಡ ಬಿ ವೈ ವಿಜಯೇಂದ್ರ, ತೇಜಸ್ವಿ ಸೂರ್ಯ, ಸಿಟಿ ರವಿ ನೇತೃತ್ವ

BJP Yuva Morcha convention in Mandya
ಮಂಡ್ಯದಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶ
author img

By

Published : Feb 22, 2023, 6:42 PM IST

Updated : Feb 23, 2023, 5:23 PM IST

ಬಿಜೆಪಿಯಿಂದ ಮಾತ್ರವೇ ಸಮಗ್ರ ಅಭಿವೃದ್ಧಿ: ವಿಜಯೇಂದ್ರ ಬಣ್ಣನೆ

ಮಂಡ್ಯ: ಎರಡೂ ದಿನಗಳಿಂದ ಮಂಡ್ಯದಲ್ಲಿ ಬಿಎಸ್​ವೈ ಪುತ್ರ ವಿಜಯೇಂದ್ರ ಸಂಚಾರ ಆರಂಭಿಸಿದ್ದಾರೆ. ಕಳೆದ ಉಪ ಚುನಾವಣೆಯಂತೆ ಈ ಸಲ ಕಮಲ ಅರಳಿಸಲು ಮಾಸ್ಟರ್ ಪ್ಲಾನ್ ಮಾಡಿದ್ದು, ಯುವ ಸಮಾವೇಶ ಆಯೋಜಿಸಿ ಯುವಕರನ್ನು ಸೆಳೆಯುವ ತಂತ್ರಗಾರಿಕೆ ಮಾಡಿದ್ದಾರೆ. ಹೌದು.. ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಕಳೆದ ಬಾರಿ ನಡೆದ ಉಪ ಚುನಾವಣೆಯಂತೆ, ಈ ಬಾರಿಯೂ ಕಮಲ ಅರಳಿಸಲು ಬಿಜೆಪಿ ಸಜ್ಜಾಗಿದೆ. ಇಂದು ಮಂಡ್ಯದಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶವನ್ನು ಮೈಷುಗರ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಮಾವೇಶಕ್ಕೆ ಮುನ್ನ ಮಂಡ್ಯದ ಇಂಡವಾಳು ಗ್ರಾಮದಲ್ಲಿ ಕ್ರೇನ್​ ಮೂಲಕ ಬೃಹತ್ ಹಣ್ಣಿನ ಹಾರ ಹಾಕುವ ಮೂಲಕ ಬಿ ವೈ ವಿಜಯೇಂದ್ರ, ತೇಜಸ್ವಿ ಸೂರ್ಯ, ಸಿಟಿ ರವಿ ಅವರನ್ನು ಸ್ವಾಗತಿಸಲಾಯಿತು. ನಗರದಲ್ಲಿ ಬಿಜೆಪಿ ಮುಖಂಡ ಸಚ್ಚಿದಾನಂದ ನೇತೃತ್ವದಲ್ಲಿ ಬೈಕ್ ರ‍್ಯಾಲಿ ಏರ್ಪಡಿಸಿ ಬಿಜೆಪಿ ಮುಖಂಡರನ್ನು ವೇದಿಕೆಗೆ ಕರೆತರಲಾಯಿತು.

ಮೋದಿ ದೇಶದ ಯುವ ಶಕ್ತಿ ಮೇಲೆ ಭರವಸೆ ಇಟ್ಟುಕೊಂಡಿದೆ: ಸಮಾವೇಶದಲ್ಲಿ ಬಿಜೆಪಿ ಮುಖಂಡ ಬಿ ವೈ ವಿಜಯೇಂದ್ರ ಮಾತನಾಡಿ, ಕೇವಲ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಮೋದಿ ಅವರು ದೇಶದ ಯುವ ಶಕ್ತಿ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಯುವ ಸಮುದಾಯದೊಂದಿಗೆ ದೇಶ ಬಲಿಷ್ಠಗೊಳಿಸಲು ಪ್ರಧಾನಿ ಮೋದಿ ಶ್ರಮ ಪಡುತ್ತಿದ್ದಾರೆ. ಯಡಿಯೂರಪ್ಪ 4 ಬಾರಿ ಸಿಎಂ ಆಗಿದ್ದರು. ಎಲ್ಲ ವರ್ಗದವರ ಕಣ್ಣೀರು ಒರೆಸುವ ಕೆಲಸ ಮಾಡಿದ್ರು. ಆದರೆ ಕಾಂಗ್ರೆಸ್‌, ಜೆಡಿಎಸ್‌ನವರು ಸುಳ್ಳಿನ ಹೇಳಿಕೆಗಳಿಂದ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಆಪಾದಿಸಿದರು.

ಮಂಡ್ಯದ ಸಕ್ಕರೆ ಕಾರ್ಖಾನೆ ಆರಂಭಿಸಿದ್ದು ಬಿಜೆಪಿ. ಕಾಂಗ್ರೆಸ್‌ ಜೆಡಿಎಸ್‌ ಪಕ್ಷಗಳು ಜಾತಿ ವಿಷ ಬೀಜ ಬಿತ್ತಿ ಜನರನ್ನು ವಂಚಿಸುತ್ತಿವೆ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಹೀಗಾಗಿ ನಾರಾಯಣಗೌಡ ಜೆಡಿಎಸ್‌ ಬಿಟ್ಟು ಬಿಜೆಪಿಗೆ ಬಂದರು. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದೇ ಬಿಡ್ತೀವಿ ಅಂತಾ ಹಗಲುಗನಸು ಕಾಣುತ್ತಿದ್ದಾರೆ ಎಂದು ಹೇಳಿದರು.

ಡಬಲ್​ ಎಂಜಿನ್​ ಇದ್ದ ಕಡೆ ಅಭಿವದ್ಧಿ: ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡಿ, ಎಲ್ಲೆಲ್ಲಿ ಡಬಲ್ ಎಂಜಿನ್ ಸರ್ಕಾರ ಇದೆಯೋ ಅಲ್ಲಲ್ಲಿ ಅಭಿವೃದ್ಧಿ ಆಗಿದೆ. ಬೇರೆ ಸರ್ಕಾರಗಳಿರುವ ರಾಜ್ಯದಲ್ಲಿ ಕೇಂದ್ರದ ಯೋಜನೆಗಳು ತಲುಪಿಲ್ಲ. ಹಿಂದೆಂದೂ ಆಗದ ಅಭಿವೃದ್ಧಿ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆಗಿದೆ. 70 ವರ್ಷಗಳಲ್ಲಿ ಆಗದಿರುವ ಹೈವೇ, ರೈಲ್ವೆ ಅಭಿವೃದ್ಧಿ ಕೆಲಸ ಬಿಜೆಪಿ ಸರ್ಕಾರದಲ್ಲಿ ಆಗಿದೆ. ಮುಂದಿನ ಬಾರಿಯೂ ಅಧಿಕಾರಕ್ಕೆ ಬರೋದು ಬಿಜೆಪಿ ಪಕ್ಷ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ರಾಜಕೀಯ ಪರಿವರ್ತನೆ ಗಾಳಿ: ಮಂಡ್ಯದಲ್ಲಿ ಸಿ.ಟಿ.ರವಿ ಮಾತನಾಡಿ, ಮಂಡ್ಯದಲ್ಲಿ ರಾಜಕೀಯ ಪರಿವರ್ತನೆ ಗಾಳಿ ಬೀಸುತ್ತಿದೆ. ಕೆಆರ್​ಪೇಟೆಯಲ್ಲಿ ಶುರುವಾದ ಪರಿವರ್ತನೆ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ. ಸಂವಿಧಾನದಲ್ಲಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳ ಸಲುವಾಗಿ ಅಂತಿದೆ. ಕಾಂಗ್ರೆಸ್‌, ಜೆಡಿಎಸ್‌ನವರು ಕುಟುಂಬದಿಂದ ಕುಟುಂಬಕ್ಕಾಗಿ, ಕುಟುಂಬದವರಿಗೋಸ್ಕರ ಅಂದುಕೊಂಡಿದ್ದಾರೆ. ಕೆಲವರು ಟಿಪ್ಪು ಟಿಪ್ಪು ಅಂತಾರೆ ಎಂದು ವ್ಯಂಗ್ಯವಾಡಿದರು.

ಮೂಡಲ ಬಾಗಿಲು ಆಂಜನೇಯ ದೇವಸ್ಥಾನವನ್ನೂ ಮಸೀದಿಯಾಗಿ ಪರಿವರ್ತನೆ ಮಾಡಿದ್ದು ಸರಿಯೇ. ಕಾಂಗ್ರೆಸ್‌, ಸಿದ್ದರಾಮಯ್ಯಗೆ ರಾಜಕೀಯವಾಗಿ ಬುದ್ಧಿ ಕಲಿಸಿ ಅಂತಾ ಮನವಿ ಮಾಡಲು ಬಂದಿದ್ದೇನೆ. ಕೆಲವರು ಕಣ್ಣೀರು ಹಾಕ್ತಾರೆ, ಗ್ಲಿಸರಿನ್ ಹಾಕಿ ಹಾಕ್ತಾರೋ ಏನೋ ಗೊತ್ತಿಲ್ಲ. ಮಂಡ್ಯ ಜನಕ್ಕಾಗಿ ಎಂದೂ ಕಣ್ಣೀರಾಕಿಲ್ಲ. ಬಿಜೆಪಿಯನ್ನೂ ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದನ್ನೂಓದಿ:ಇಂಜಿನಿಯರಿಂಗ್‍ ಕೃಷಿ ನಿರ್ದೇಶನಾಲಯ ಸ್ಥಾಪನೆ: ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ - ಸಚಿವ ಬಿ ಸಿ ಪಾಟೀಲ್

Last Updated : Feb 23, 2023, 5:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.