ETV Bharat / state

ಅನ್ನಭಾಗ್ಯ ಅಕ್ಕಿ ಪಾಲಿಶ್​ ಮಾಡಿ ಹೊರದೇಶಕ್ಕೆ ರಫ್ತು?.. ಮಂಡ್ಯದಲ್ಲಿ ಬೆಳಕಿಗೆ ಬಂತು ಪ್ರಕರಣ - mandya latest news

ಅನ್ನಭಾಗ್ಯ ಅಕ್ಕಿ ಪಾಲಿಶ್​ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಮಂಡ್ಯ ತಾಲೂಕಿನಲ್ಲಿ ಪತ್ತೆಯಾಗಿದೆ.

annabhagya rice illegal sale case found in mandya
ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ?
author img

By

Published : Aug 15, 2021, 1:57 PM IST

Updated : Aug 15, 2021, 2:04 PM IST

ಮಂಡ್ಯ: ಬಡವರು ಹಸಿವಿನಿಂದ ನರಳಬಾರದೆಂಬ ಉದ್ದೇಶದಿಂದ ಸರ್ಕಾರ ಉಚಿತ ಪಡಿತರ ವಿತರಣೆ ಮಾಡುತ್ತದೆ. ಆದ್ರೆ ಬಡವರಿಗೆ ಸೇರಬೇಕಿರುವ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಅದ್ರಲ್ಲೂ ಅನ್ನ ಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿ ಹೊರ ದೇಶಕ್ಕೆ ರಫ್ತು ಮಾಡಲಾಗುತ್ತಿದೆ ಎಂಬ ಆರೋಪ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯ ತಾಲೂಕಿನ ಗೊರವಾಲೆ ಗ್ರಾಮದ ಜೈ ಮಾರುತಿ ಅಕ್ಕಿ ಗಿರಣಿಯಲ್ಲಿ 250 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಎರಡು ಕ್ಯಾಂಟರ್ ಮೂಲಕ ಸಾಗಿಸಲಾಗಿತ್ತು‌. ಖಚಿತ ಮಾಹಿತಿ ಮೇರೆಗೆ ಮಂಡ್ಯ ತಹಶೀಲ್ದಾರ್​​ ಚಂದ್ರಶೇಖರ್ ಶಂ. ಗಾಳಿ ನೇತೃತ್ವದಲ್ಲಿ ಶಿವಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಚಾಲಕರಿಬ್ಬರು ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದಾರೆ. ಎರಡು ಕ್ಯಾಂಟರ್‌ನಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಲಾಗಿದ್ದು, ಇದು ಅನ್ನಭಾಗ್ಯದ ಅಕ್ಕಿ ಎಂಬುದು ಖಚಿತವಾಗಿದೆ. ರೈಸ್ ಮಿಲ್ ಮಾಲೀಕರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ?

ರೈಸ್ ಮಿಲ್​ಗೆ ಮಂಡ್ಯದಿಂದ ದಲ್ಲಾಳಿಗಳ ಮೂಲಕ ಅನ್ನಭಾಗ್ಯ ಅಕ್ಕಿ ಸರಬರಾಜು ಆಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಲೋಡ್‌ಗಟ್ಟಲೇ ತರುವ ಈ ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿ ಮಲೇಷಿಯಾ ಎಂಬ ಬ್ರ್ಯಾಂಡ್ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತಿತ್ತು. ರೈಸ್ ಮಿಲ್​ನಲ್ಲೇ ಮಲೇಷಿಯಾ ಬ್ರ್ಯಾಂಡ್ ಚೀಲಗಳು ಸಹ ಪತ್ತೆಯಾಗಿದೆ. ಈ ಅನ್ನಭಾಗ್ಯ ಅಕ್ಕಿ ಕೇವಲ ರಾಜ್ಯ, ಹೊರ ರಾಜ್ಯವಲ್ಲದೇ ಹೊರದೇಶಗಳಿಗೂ ಎಕ್ಸ್​ಪೋರ್ಟ್ ಆಗುತ್ತಿದೆ ಎಂಬುದು ಸ್ಥಳೀಯರ ಆರೋಪ.

ಈ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಮಂಡ್ಯದಲ್ಲಿ ಆಗಾಗ್ಗೆ ಇಂತಹ ಘಟನೆಗಳು ಬೆಳಕಿಗೆ ಬರುತ್ತಿದ್ದು, ಅಧಿಕಾರಿಗಳು ಶಾಮೀಲಾಗಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಲಾರಂಭಿಸಿದೆ.

Last Updated : Aug 15, 2021, 2:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.