ETV Bharat / state

ಎಸಿಬಿ ಬಲೆಗೆ ಬಿದ್ದ ಅಧಿಕಾರಿ ಮತ್ತು ಡೇಟಾ ಎಂಟ್ರಿ ಆಪರೇಟರ್​..! - An ACB trap land records officer

ಮಂಡ್ಯದ ಭೂದಾಖಲೆಗಳ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ವಿಜಯಾ ಹಾಗೂ ಭದ್ರಾವತಿಯ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯ ಮೇಲೆ ಎಸಿಬಿ ತಂಡ ದಾಳಿ ನಡೆಸಿದೆ.

An ACB trap land records officer
ಭೂದಾಖಲೆಗಳ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ವಿಜಯಾ
author img

By

Published : Jan 19, 2021, 7:56 PM IST

Updated : Jan 19, 2021, 8:59 PM IST

ಮಂಡ್ಯ: ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಭೂದಾಖಲೆಗಳ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ವಿಜಯಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಇಲಾಖೆಯಲ್ಲಿ ಸರ್ವೇಯರ್‌ ಆಗಿ ಕೆಲಸ ಮಾಡುತ್ತಿದ್ದ ಮಹದೇವಸ್ವಾಮಿ ಎಂಬುವವರು ಸಲ್ಲಿಸಿದ್ದ ದೂರಿನನ್ವಯ, 25 ಸಾವಿರ ಲಂಚ ಸ್ವೀಕರಿಸುವ ಸಮಯದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಹೊರಗುತ್ತಿಗೆ ಸರ್ವೇಯರ್‌ಗಳ ಗುತ್ತಿಗೆ ಅವಧಿ ಮುಂದುವರಿಸುವುದಕ್ಕಾಗಿ, ವಿಜಯಾ ಅವರು ಪ್ರತಿ ಅಭ್ಯರ್ಥಿಯಿಂದ 30 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಮಹದೇವಸ್ವಾಮಿ ದೂರು ನೀಡಿದ್ದರು. ಲಂಚದ ಹಣವನ್ನು ವಶಕ್ಕೆ ಪಡೆದ ಪೊಲೀಸರು ಅಧಿಕಾರಿಯನ್ನು ಬಂಧಿಸಿದ್ದು, ನಗರದ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಾಟಾ ಎಂಟ್ರಿ ಆಪರೇಟರ್ ಎಸಿಬಿ ಬಲೆಗೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯ ಮೇಲೆ, ಎಸಿಬಿ ತಂಡ ದಾಳಿ ನಡೆಸಿದೆ. ಈ ವೇಳೆ ಶಾಮಿಯಾನ ಅಂಗಡಿಯ ಜಿಎಸ್​​ಟಿ ನೋಂದಣಿ ಮಾಡಿ ಕೊಡಲು 2,500 ರೂ. ಲಂಚ ಪಡೆಯುವಾಗ ಎಸಿಬಿ ತಂಡ ದಾಳಿ ನಡೆಸಿದೆ.

ಡಾಟಾ ಎಂಟ್ರಿ ಆಪರೇಟರ್ ವೇಣು(36) ಎಸಿಬಿ ಬಲೆಗೆ ಬಿದ್ದಿದ್ದು, ಶಿವಮೊಗ್ಗ ಡಿವೈಎಸ್​​ಪಿ ಲೋಕೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

Last Updated : Jan 19, 2021, 8:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.