ಮಂಡ್ಯ : ಜಿಲ್ಲೆಯಲ್ಲಿಂದು 1385 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 48694ಕ್ಕೆ ಏರಿಕೆಯಾಗಿದೆ.
ಒಂದೇ ದಿನ 13 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೆ ಒಟ್ಟು 323 ಮಂದಿ ಮೃತಪಟ್ಟಿದ್ದಾರೆ. 1215 ಮಂದಿ ಚೇತರಿಕೆ ಕಂಡಿದ್ದು, ಈವರೆಗೆ 39972 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8397 ತಲುಪಿದೆ.
ಓದಿ:ಸಚಿವ ಎಂಟಿಬಿ ಆಕ್ರೋಶಕ್ಕೆ ಬೆಂಗಳೂರು ಗ್ರಾಮಾಂತರ ಡಿಹೆಚ್ಒ ಎತ್ತಂಗಡಿ
ತಾಲೂಕುವಾರು ಪ್ರಕರಣ : ಮಂಡ್ಯ 264, ಮದ್ದೂರು 312, ಮಳವಳ್ಳಿ 157, ಪಾಂಡವಪುರ 163, ಶ್ರೀರಂಗಪಟ್ಟಣ 69, ಕೆ.ಆರ್.ಪೇಟೆ 156, ನಾಗಮಂಗಲ 238, ಹೊರ ಜಿಲ್ಲೆಯ 26 ಪ್ರಕರಣ ದಾಖಲಾಗಿವೆ.