ETV Bharat / state

ಅಬ್ಬಾ! ಜೀವಜಲಕ್ಕಾಗಿ ಈ ಗ್ರಾಮಸ್ಥರ ಪಾಡು ಹೇಳತೀರದು! - undefined

ನೀರು ಸಕಲ ಜೀವಿಗಳಿಗೂ ಬದುಕಿಗಾಸರೆ. ಜೀವಜಲಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ ಪರದಾಟ ನಡೆಯುತ್ತಿದೆ.ಜಿಲ್ಲೆಯ ಗುಡಗೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರು ಮೂರ್ನಾಲ್ಕು ಕಿಲೋಮೀಟರ್ ದೂರ ಹೋಗಬೇಕಿದೆ.

ಕೃಷಿಹೊಂಡದ ನೀರೇ ಈ ಗ್ರಾಮದ ಜನರಿಗೆ ಆಸರೆ
author img

By

Published : May 17, 2019, 10:04 PM IST

ಕೊಪ್ಪಳ: ಮಳೆ ಪ್ರಾರಂಭವಾಗಿದ್ದರೂ ಜಿಲ್ಲೆಯಲ್ಲಿ ಬೇಸಿಗೆಯ ತಾಪ ತಗ್ಗಿಲ್ಲ.ಜಲಮೂಲಗಳೆಲ್ಲಾ ಬಹುತೇಕ ಬತ್ತಿಹೋಗಿದ್ದು, ಕುಡಿಯುವ ನೀರಿಗಾಗಿ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕೊಪ್ಪಳ, ಯಲಬುರ್ಗಾ, ಕುಕನೂರು ಸೇರಿದಂತೆ ಜಿಲ್ಲೆಯ ಇನ್ನಿತರೆ ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಜನ ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಅದ್ರಲ್ಲೂ ಕೊಪ್ಪಳದ ಕಟ್ಟಕಡೆಯ ಗ್ರಾಮವಾಗಿರುವ ಗುಡಗೇರಿಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಆ ಗ್ರಾಮದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಕೃಷಿಹೊಂಡದಲ್ಲಿ ಸಂಗ್ರಹವಾಗಿರುವ ನೀರೇ, ಗುಡಗೇರಿ ಗ್ರಾಮದ ಜನರ ದಾಹ ನೀಗಿಸುತ್ತಿದೆ.

ಎತ್ತಿನಬಂಡಿ, ಬೈಕ್, ಸೈಕಲ್ ಹಾಗೂ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ನೀರು ತರುವುದು ಅನಿವಾರ್ಯವಾಗಿದೆ. ವಾಹನಗಳಿದ್ದವರು ಹೇಗೋ ಇಷ್ಟು ದೂರ ಸಾಗಿ ನೀರು ತೆಗೆದುಕೊಂಡು ಹೋಗುತ್ತಾರೆ. ಆದರೆ, ವಾಹನ ಸೌಲಭ್ಯ ಇಲ್ಲದವರು ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ಈ ಕೃಷಿಹೊಂಡಕ್ಕೆ ಬಂದು ಕುಡಿಯಲು ನೀರು ತರುವ ಪಾಡು ಹೇಳತೀರದು.

ಕೃಷಿ ಹೊಂಡದ ನೀರೇ ಈ ಗ್ರಾಮದ ಜನರಿಗೆ ಆಸರೆ

ಇದೇ ರೀತಿಯಲ್ಲಿ ಕುಕನೂರು, ಯಲಬುರ್ಗಾ, ಕುಷ್ಟಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿಯೂ ನೀರಿಗಾಗಿ ತತ್ವಾರವಿದೆ. ಗ್ರಾಮೀಣ ಭಾಗದಲ್ಲಿ ನೀರಿನ ಘಟಕಗಳಿದ್ದರೂ,ಅವೂ ಕೆಟ್ಟು ಕೆಲಸಕ್ಕೆ ಬಾರದಂತಾಗಿವೆ.

ಕುಕನೂರು ತಾಲೂಕಿನ ಬಿನ್ನಾಳ, ಸೋಂಪುರ, ಸಿದ್ನೇಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಸಮಸ್ಯೆ ಬಿಗಡಾಯಿಸಿದ್ದು,ನೀರಿಗಾಗಿ ಪಕ್ಕದ ಚಿಕ್ಕೇನಕೊಪ್ಪ ಗ್ರಾಮದ ಕೆರೆಗೆ ಹೋಗಬೇಕಿದೆ.

ಪ್ರತಿ ಬಾರಿಯೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದರೆ, ಅದಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಈ ಬಗ್ಗೆ ಕೆಲಸ ಮಾಡುವುದಿಲ್ಲ ಎಂದು ಬಿನ್ನಾಳ ಗ್ರಾಮದ ಜಗದೀಶ್ ಚಟ್ಟಿ ಅಸಮಾಧಾನ ತೋಡಿಕೊಂಡರು.

Intro:Body:ಕೊಪ್ಪಳ:-ನೀರು ಅನ್ನೋದು ಜೀವಿಗಳಿಗೆ ಜೀವಜಲ. ಇಂತಹ ಜೀವಜಲಕ್ಕೆ ಜಿಲ್ಲೆಯಲ್ಲಿ ಈಗ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಗುಡಗೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರು ಮೂರ್ನಾಲ್ಕು ಕಿಲೋಮೀಟರ್ ಹೋಗಿ ನೀರು ತರಬೇಕಾಗಿದೆ. ಇನ್ನು ಗುಡಗೇರಿ ಗ್ರಾಮದ ಜನರ ನೀರಿನ ಸಮಸ್ಯೆ ಆ ದೇವರಿಗೆ ಪ್ರೀತಿ ಎನ್ನುವಂತಿದೆ.
ಹೌದು..., ಮಳೆಗಾಲ ಪ್ರಾರಂಭವಾಗಿದ್ದರೂ ಸಹ ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯ ತಾಪ ಇನ್ನೂ ತಗ್ಗಿಲ್ಲ. ಜಲಮೂಲಗಳೆಲ್ಲಾ ಬಹುತೇಕ ಬತ್ತಿಹೋಗಿದ್ದು ಕುಡಿಯುವ ನೀರಿಗಾಗಿ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿವೆ. ಅದರಲ್ಲೂ ಕೊಪ್ಪಳ, ಯಲಬುರ್ಗಾ, ಕುಕನೂರು ಸೇರಿದಂತೆ ಜಿಲ್ಲೆಯ ಇನ್ನಿತರೆ ತಾಲೂಕುಗಳಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಜೀವಜಲಕ್ಕಾಗಿ ಜನರು ಪರದಾಡುತ್ತಿದ್ದಾರೆ. ಇನ್ನು ಕೊಪ್ಪಳ ತಾಲೂಕಿನ ಕಟ್ಟಕಡೆಯ ಗ್ರಾಮವಾಗಿರುವ ಗುಡಗೇರಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಆ ಗ್ರಾಮದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಕೃಷಿಹೊಂಡದಲ್ಲಿ ಸಂಗ್ರಹವಾಗಿರುವ ನೀರೇ ಗುಡಗೇರಿ ಗ್ರಾಮದ ಜನರ ದಾಹವನ್ನು ನೀಗಿಸುತ್ತಿದೆ. ಎತ್ತಿನಬಂಡಿ, ಬೈಕ್, ಸೈಕಲ್ ಹಾಗೂ ಟ್ರಾಕ್ಟರ್ ತೆಗೆದುಕೊಂಡು ಬಂದು ನೀರು ತರೋದು ಅನಿವಾರ್ಯವಾಗಿದೆ. ವಾಹನಗಳಿದ್ದವರು ಹೇಗೋ ಇಲ್ಲಿಗೆ ಬಂದು ನೀರು ತೆಗೆದುಕೊಂಡು ಹೋಗುತ್ತಾರೆ. ಆದರೆ, ವಾಹನ ಇಲ್ಲದವರು ಮಕ್ಕಳಿಂದ ಹಿಡಿದು ವಯೋವೃದ್ಧರು ಸಹ ಈ ಕೃಷಿಹೊಂಡಕ್ಕೆ ಬಂದು ಕುಡಿಯಲು ನೀರು ತರುವ ಪಾಡು ಹೇಳತೀರದು. ಗ್ರಾಮದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಕೃಷಿಹೊಂಡದಲ್ಲಿ ನೀರೇ ಈಗ ಆ ಗ್ರಾಮದ ಜನರಿಗೆ ಆಧಾರವಾಗಿದೆ. ಇದು ಕೇವಲ ಗುಡಗೇರಿ ಗ್ರಾಮ ಎಕ್ಸಾಂಪಲ್ ಅಷ್ಟೆ. ಇದೇ ರೀತಿಯಲ್ಲಿ ಕುಕನೂರು, ಯಲಬುರ್ಗಾ, ಕುಷ್ಟಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿಯೂ ಸಹ ತತ್ವಾರವಿದೆ. ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸಹ ಅವು ಕೆಟ್ಟು ಕೆಲಸಕ್ಕೆ ಬಾರದಂತಾಗಿವೆ. ಕುಕನೂರು ತಾಲೂಕಿನ ಬಿನ್ನಾಳ, ಸೋಂಪುರ, ಸಿದ್ನೇಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಇದೇ ಸಮಸ್ಯೆ ಇದ್ದು ಕುಡಿಯುವ ನೀರಿಗಾಗಿ ಪಕ್ಕದೂರಾದ ಚಿಕ್ಕೇನಕೊಪ್ಪ ಗ್ರಾಮದ ಕೆರೆಗೆ ಹೋಗಿ ನೀರು ತರುತ್ತಿದ್ದಾರೆ. ಪ್ರತಿ ಬಾರಿಯೂ ನಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದರೆ, ಅದಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕು. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಮಾಣಿಕ ಈ ಬಗ್ಗೆ ಗಂಭೀರವಾಗಿ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ ಬಿನ್ನಾಳ ಗ್ರಾಮದ ಜಗದೀಶ್ ಚಟ್ಟಿ ಅವರು. ಇನ್ನು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳಿಗೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರಾದರೂ ಈ ಗ್ರಾಮಗಳಲ್ಲಿನ ಸಮಸ್ಯೆ ಸಮಸ್ಯೆಯಾಗಿ ಅವರಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸುವಂತಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸಂಬಂಧಿಸಿದ ಅಧಿಕಾರಿಗಳು ಗುಡಿಗೇರಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಉಂಟಾಗಿರುವ ಜಲಕ್ಷಾಮವನ್ನು ನಿವಾರಿಸಬೇಕಿದೆ.

ಬೈಟ್1:- ಜಗದೀಶ್ ಚಟ್ಟಿ, ಬಿನ್ನಾಳ ಗ್ರಾಮಸ್ಥ.

--------------Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.