ETV Bharat / state

ಮೃತ್ಯುಂಜಯ ಶ್ರೀಗಳ ಶಾಪದಿಂದ ಅಧಿಕಾರ ಕಳೆದುಕೊಂಡ ಯಡಿಯೂರಪ್ಪ : ವಿಜಯಾನಂದ ಕಾಶಪ್ಪನವರ್ - Vijayanand kashappanavar

ಸ್ವಾಮೀಜಿಯವರನ್ನು 712 ಕಿ.ಮೀ ನಡೆಸುವ ಅವಶ್ಯಕತೆ ಇತ್ತಾ? ಮೀಸಲಾತಿ ನೀಡುತ್ತೇನೆ ಎಂದು ಸುವರ್ಣಸೌಧದ ಮುಂದೆ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆದರೆ, ನೀಡಲಿಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿಗಾಗಿಯೇ ಯಡಿಯೂರಪ್ಪ ಅವರನ್ನು ಬೈದದ್ದು. ಯಾವುದೇ ವೈಯಕ್ತಿಕ ಕಾರಣಕ್ಕೆ ಅಲ್ಲ..

Vijayanand  kashappanavar talks over BS Yediyurappa
ವಿಜಯಾನಂದ ಕಾಶಪ್ಪನವರ್
author img

By

Published : Sep 19, 2021, 3:33 PM IST

ಕೊಪ್ಪಳ : ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಬಿ ಎಸ್ ಯಡಿಯೂರಪ್ಪ ಅವರ ಅಧಿಕಾರ ಹೋಗಿದೆ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು.

ಸ್ವಾಮೀಜಿ ಶಾಪದಿಂದ ಅಧಿಕಾರದಿಂದ ಇಳಿದರಂತೆ ಬಿಎಸ್‌ವೈ.. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆ ನೀಡಿರುವುದು..

ಕೊಪ್ಪಳದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುತ್ತೇನೆ ಎಂದು ಹೇಳಿ ಮೀಸಲಾತಿ ಕೊಡಲಿಲ್ಲ. ಸ್ವಾಮೀಜಿ ಅವರ ಶಾಪ ಯಡಿಯೂರಪ್ಪಗೆ ತಟ್ಟಿತು. ಅದೇ ಕಾರಣಕ್ಕಾಗಿಯೇ ಅವರ ಅಧಿಕಾರ ಹೋಯಿತು ಎಂದರು.

ಸ್ವಾಮೀಜಿಯವರನ್ನು 712 ಕಿ.ಮೀ ನಡೆಸುವ ಅವಶ್ಯಕತೆ ಇತ್ತಾ? ಮೀಸಲಾತಿ ನೀಡುತ್ತೇನೆ ಎಂದು ಸುವರ್ಣಸೌಧದ ಮುಂದೆ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆದರೆ, ನೀಡಲಿಲ್ಲ. ಇನ್ನು, ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿಗಾಗಿಯೇ ಯಡಿಯೂರಪ್ಪ ಅವರನ್ನು ಬೈದದ್ದು. ಯಾವುದೇ ವೈಯಕ್ತಿಕ ಕಾರಣಕ್ಕೆ ಅಲ್ಲ ಎಂದು ಇದೇ ವೇಳೆ ತಿಳಿಸಿದರು‌.

ಇದನ್ನೂ ಓದಿ: ಯತ್ನಾಳ್ 'ಬಾಹುಬಲಿ'ಇದ್ದಂಗೆ.. ನಿರಾಣಿಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಡಿಯೂರಪ್ಪ.. ಶ್ರೀ ಜಯಮೃತ್ಯುಂಜಯ ಸ್ವಾಮೀಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.