ETV Bharat / state

Video: ಮಹಿಳೆಗೆ ಥಳಿಸುತ್ತಿದ್ದವರ ತಡೆಯಲು ತೆರಳಿದ ಕಾನ್ಸ್​ಟೇಬಲ್ ಮೇಲೂ ಇಬ್ಬರಿಂದ ಹಲ್ಲೆ - Paddy land

ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡುತ್ತಿದ್ದ ಇಬ್ಬರನ್ನು ತಡೆಯಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕಾನ್ಸ್​​ಟೇಬಲ್ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

two-man-attacked-a-police-constable-who-came-to-rescue-a-women-from-them
ಮಹಿಳೆಗೆ ಥಳಿಸುತ್ತಿದ್ದವರ ತಡೆಯಲು ತೆರಳಿದ ಕಾನ್ಸ್​ಟೇಬಲ್ ಮೇಲೂ ಇಬ್ಬರಿಂದ ಹಲ್ಲೆ
author img

By

Published : Jun 23, 2021, 3:47 PM IST

ಗಂಗಾವತಿ (ಕೊಪ್ಪಳ): ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆ ಮೇಲೆ ಹಲ್ಲೆ ಮಾಡುತ್ತಿರುವಾಗ ಬಿಡಿಸಲು ಹೋದ ಪೊಲೀಸ್ ಕಾನ್ಸ್​ಟೇಬಲ್​​ ಮೇಲೆಯೂ ಇಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಸರೋಜಾ ನಗರದ ಸಂಜಯ್ ಹಾಗೂ ಸೋಮಶೇಖರ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ನಗರಠಾಣೆಯಲ್ಲಿ ಕಾನ್ಸ್​​ಟೇಬಲ್ ವೀರೇಶ್ ದೂರು ನೀಡಿದ್ದಾರೆ.

ಮಹಿಳೆಗೆ ಥಳಿಸುತ್ತಿದ್ದವರ ತಡೆಯಲು ತೆರಳಿದ ಕಾನ್ಸ್​ಟೇಬಲ್ ಮೇಲೂ ಇಬ್ಬರಿಂದ ಹಲ್ಲೆ

ನಡೆದಿದ್ದೇನು..?

ಸರೋಜಾನಗರದ ಬಿಜೆಪಿ ನಾಯಕಿ ಪುಷ್ಪಾಂಜಲಿ ಗುನ್ನಾಳ ಅವರ ಮೇಲೆ ಇಬ್ಬರು ಹಲ್ಲೆ ನಡೆಸುತ್ತಿದ್ದಾರೆ ಎಂದು ಠಾಣೆಗೆ ಕರೆ ಬಂದಿತ್ತು. ಕರೆ ಆಧರಿಸಿ ಕಾನ್ಸ್​ಟೇಬಲ್ ವೀರೇಶ್ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ, ಮಹಿಳೆ ಮೇಲೆ ಇಬ್ಬರು ಹಲ್ಲೆಗೆ ಮುಂದಾಗಿರುವುದನ್ನು ಕಂಡು ಬಿಡಿಸಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧವೇ ತಿರುಗಿ ಬಿದ್ದಿದ್ದು, ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಓದಿ: ಫೋನ್ ಟ್ಯಾಪಿಂಗ್ ಆರೋಪ​ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಶಾಸಕ ಅರವಿಂದ್ ಬೆಲ್ಲದ್​ಗೆ ನೋಟಿಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.