ETV Bharat / state

ಕೊಪ್ಪಳ: ಕೋವಿಡ್​​ನಿಂದ ಸಂಕಷ್ಟಕ್ಕೊಳಗಾದವರ ಕೈ ಹಿಡಿದ ನರೇಗಾ ಯೋಜನೆ

author img

By

Published : Oct 25, 2020, 3:49 PM IST

ಕೋವಿಡ್​​ನಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೈ ಹಿಡಿದಿದ್ದು, ಈ ಬಾರಿ ಹೆಚ್ಚಿನ ಜನರು ಈ ಯೋಜನೆಯಡಿ ಕೆಲಸ ಮಾಡಿದ್ದಾರೆ.

The NAREGA project helps to koppal people who lost their jobs from covid
ಕೋವಿಡ್​​ನಿಂದ ಸಂಕಷ್ಟಕ್ಕೊಳಗಾದವರ ಕೈ ಹಿಡಿದ ನರೇಗಾ ಯೋಜನೆ

ಕೊಪ್ಪಳ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮೂಲಕ ಜನರಿಗೆ ನೆರವಾಗಿದೆ‌. ಅದರಲ್ಲೂ ಈ ವರ್ಷ ಕೋವಿಡ್​​ ಭೀತಿಯಿಂದ ಸಂಕಷ್ಟಕ್ಕೊಳಗಾಗಿದ್ದ ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ನೀಡಿ ಸಂಕಷ್ಟದ ಸಮಯದಲ್ಲಿ ಕೈ ಹಿಡಿದಿದೆ.

ಕೋವಿಡ್​​ನಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಈ ಯೋಜನೆ ವರದಾನವಾಗಿದೆ. ಕೆಲಸ ಕೇಳಿದ ವಲಸೆ ಕಾರ್ಮಿಕರು, ಖಾಸಗಿಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಹಾಗೂ ಬೇರೆ-ಬೇರೆ ವೃತ್ತಿಯ ಜನರು ಸಹ ಈ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಬಾರಿ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2.5 ಲಕ್ಷ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಇದ್ದು ಈ ಪೈಕಿ 1.75 ಲಕ್ಷ ಜನರು ಈ ಯೋಜನೆಯಡಿ ಕೆಲಸ ಮಾಡಿದ್ದಾರೆ‌.

ಲಾಕ್​​ಡೌನ್ ಸಂದರ್ಭದಲ್ಲಿ ಜಿಲ್ಲೆಗೆ ಬಂದಿದ್ದ ಸುಮಾರು 47 ಸಾವಿರ ವಲಸೆ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದು, ಸಂಕಷ್ಟಕ್ಕೊಳಗಾಗಿದ್ದ ಸಾಕಷ್ಟು ಜನರಿಗೆ ಬಹಳ ನೆರವಾಗಿದೆ. ಅಲ್ಲದೇ ಕೂಲಿ ಹಣ ಪಾವತಿಯೂ ಕೂಡ ವಿಳಂಬವಾಗಿಲ್ಲ.

ಕೊರೊನಾ ಲಾಕ್​​ಡೌನ್ ಸಂದರ್ಭದಲ್ಲಿ ವಾಪಸ್ ಊರಿಗೆ ಬಂದಿದ್ದ ಹೆಚ್ಚಿನ ವಲಸೆ ಕಾರ್ಮಿಕರಲ್ಲಿ ಅರ್ಧದಷ್ಟು ಜನರಲ್ಲಿ ಉದ್ಯೋಗ ಖಾತ್ರಿ ಕೂಲಿ ಚೀಟಿಗಳು ಸಹ ಇರಲಿಲ್ಲ. ಅವರಿಗೆ ತೊಂದರೆಯಾಗದ ರೀತಿಯಲ್ಲಿ ಉದ್ಯೋಗ ಚೀಟಿಗಳನ್ನು ಮಾಡಿಸಿ ಕೆಲಸ ನೀಡಲಾಗಿದೆ.

ಒಟ್ಟಾರೆಯಾಗಿ ಉದ್ಯೋಗ ಖಾತ್ರಿ ಯೋಜನೆಯು ಲಾಕ್​​ಡೌನ್ ಸಂದರ್ಭದಿಂದ ಈವರೆಗೂ ಜನರಿಗೆ ಕೆಲಸ ನೀಡುವ ಮೂಲಕ ಅವರ ಸಂಕಷ್ಟಕ್ಕೆ ನೆರವಾಗಿದೆ. ಜೊತೆಗೆ ರೈತರ ಜಮೀನಿನಲ್ಲಿ ಬದು ನಿರ್ಮಾಣ, ನಾಲಾ ಸ್ವಚ್ಛಗೊಳಿಸಿ ಅಂತರ್ಜಲ ಮಟ್ಟ ಒಂದಿಷ್ಟು ಹೆಚ್ಚಳವಾಗಲು ಸಹ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.