ಕುಷ್ಟಗಿ (ಕೊಪ್ಪಳ): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ದೋಟೀಹಾಳದ ಸುಖಮುನಿ ದೇವಾಲಯದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ದೋಟಹಾಳ ಸ್ವ ಸಹಾಯ ಸಂಘ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿ 85 ಮಂದಿ ದೇವಾಲಯ ಗರ್ಭಗುಡಿ ಮತ್ತು ದೇವಾಲಯ ಆವರಣ ಸ್ವಚ್ಛಗೊಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯೋಜನಾಧಿಕಾರಿ, ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತರು ಪ್ಲಾಸ್ಟಿಕ ಕವರ್, ಬಾಳೆಹಣ್ಣು, ತೆಂಗಿನ ಸಿಪ್ಪೆ ಅಲ್ಲಲ್ಲಿ ಎಸೆಯದೇ ಕಸದ ತೊಟ್ಟಿಗೆ ಸ್ವಯಂ ಶಿಸ್ತು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಓದಿ : ಇವನು ಸೆಲೆಬ್ರಿಟಿಯಲ್ಲ ಆದರೂ ಈತನ ಅಭಿಮಾನಿಗಳಿಗೇನೂ ಕಮ್ಮಿ ಇಲ್ಲ.. ಅಖಾಡಕ್ಕಿಳಿದರೆ "ಅರ್ಜುನ"
ಕಳೆದ 5 ವರ್ಷದಿಂದ ಪ್ರತೀ ವರ್ಷ ಸಂಕ್ರಾಂತಿಯ ಮೊದಲು ಒಕ್ಕೂಟ ಮತ್ತು ದೇವಸ್ಥಾನ ಆಡಳಿತ ಮಂಡಳಿಯ ಸಹಕಾರದೊಂದಿಗೆ ರಾಜ್ಯಾದ್ಯಂತ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಶ್ರದ್ಧಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಾ ಬಂದಿರುತ್ತಾರೆ. ಅದರಂತೆ ನಾವು ಸ್ವಚ್ಛತೆಯನ್ನು ಶ್ರದ್ಧಾ ಕೇಂದ್ರದಿಂದಲೇ ಆರಂಭಿಸಿ ಮನೆ, ರಸ್ತೆ, ವಠಾರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಂಕಲ್ಪಿಸಬೇಕು. ಸಂಕ್ರಾಂತಿಯ ಮೊದಲು ಕುಷ್ಟಗಿ ತಾಲೂಕಿನಲ್ಲಿ 100 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ದೋಟೀಹಾಳ ವಲಯ ಮೇಲ್ವಿಚಾರಕ ಮಂಜುನಾಥ, ಸೇವಾಪ್ರತಿನಿಧಿ ಗ್ಯಾನಪ್ಪ, ಜಮೀಲಾ ಇದ್ದರು.