ETV Bharat / state

ಡಾ.ಮನು ಬಳಿಗಾರ ಕನ್ನಡ ಸಾಹಿತ್ಯ ಪರಿಷತ್​​ಗೆ ದುಃಸ್ವಪ್ನ: ಸಾಹಿತಿ ಕುಂ. ವೀರಭದ್ರಪ್ಪ

ಕನ್ನಡ ಸಾಹಿತ್ಯ ಪರಿಷತ್ ಶತಮಾನದ ಸಂಭ್ರಮದ ಸಂಸ್ಥೆ. ಆದ್ರೀಗ ಕನ್ನಡ ಸಾಹಿತ್ಯ ಪರಿಷತ್ ಬೇರೆ-ಬೇರೆ ರೂಪ ಪಡೆಯುತ್ತಿದ್ದು, ಸಾಹಿತ್ಯ, ಭಾಷೆ ಬಿಟ್ಟು ರಾಜಕಾರಣದೆಡೆ ವಾಲುತ್ತಿದೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದರು.

Senior litterateur Kum Veerabhadrappa
ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ
author img

By

Published : Feb 27, 2021, 1:17 PM IST

ಕುಷ್ಟಗಿ(ಕೊಪ್ಪಳ): ಹಾಲಿ ಕ.ಸಾ.ಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ ಕನ್ನಡ ಸಾಹಿತ್ಯ ಪರಿಷತ್​​ಗೆ ದುಃಸ್ವಪ್ನವಾಗಿದ್ದಾರೆ. ಅವರು ಅಧಿಕಾರಾವಧಿಯನ್ನು 5 ವರ್ಷಕ್ಕೆ ವಿಸ್ತರಿಸಿದ್ದು, ಸರ್ಕಾರದ ಮುಲಾಜಿಗೆ ಒಳಗಾಗಿದ್ದಾರೆ. ಕ.ಸಾ.ಪ.ವನ್ನು ಸರ್ಕಾರಕ್ಕೆ ಒತ್ತೆ ಇಟ್ಟಿದ್ದಾರೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ವಾಗ್ದಾಳಿ ನಡೆಸಿದರು.

ಡಾ.ಮನು ಬಳಿಗಾರ ಕನ್ನಡ ಸಾಹಿತ್ಯ ಪರಿಷತ್​​ಗೆ ದುಃಸ್ವಪ್ನ: ಸಾಹಿತಿ ಕುಂ. ವೀರಭದ್ರಪ್ಪ

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಶತಮಾನದ ಸಂಭ್ರಮದ ಸಂಸ್ಥೆ. ಆದ್ರೀಗ ಕನ್ನಡ ಸಾಹಿತ್ಯ ಪರಿಷತ್ ಬೇರೆ-ಬೇರೆ ರೂಪ ಪಡೆಯುತ್ತಿದ್ದು, ಸಾಹಿತ್ಯ, ಭಾಷೆ ಬಿಟ್ಟು ರಾಜಕಾರಣದೆಡೆ ವಾಲುತ್ತಿದೆ ಎಂದು ಆರೋಪಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರು, ಈ ಬಾರಿಯ ಚುನಾವಣೆಯಲ್ಲಿ ಸಾಹಿತ್ಯದ ಬಗ್ಗೆ ಗೊತ್ತಿರುವವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಿದೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಾಗೂ ರಾಜಕೀಯ ಚುನಾವಣೆಗೂ ವ್ಯತ್ಯಾಸ ಇಲ್ಲದಂತಾಗಿದೆ. ಬಹಳಷ್ಟು ಯೋಚಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆಯೇ ಹೊರತು ಜಾತಿ, ಪ್ರಾದೇಶಿಕ, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಶಿಶುನಾಳ ಷರೀಪ ಗುರು ಗೋವಿಂದ ಭಟ್ಟರ ವಂಶಸ್ಥ ಇವೆಲ್ಲಾ ಮಾನದಂಡಗಳಲ್ಲ. ಯಾವುದೇ ರಾಜಕೀಯ ಪಕ್ಷ ಇವರನ್ನೇ ಗೆಲ್ಲಿಸಬೇಕೆಂದು ಠರಾವು ಪಾಸು ಮಾಡುವ ಹಾಗೇ ಬೆಳವಣಿಗೆ ನಡೆದಿರುವುದನ್ನು ಖಂಡಿಸುವೆ. ಇಂತವರನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಬಾರದು. ಈಗಿನ ಸ್ಪರ್ಧೆಯೇ ಅನಾಗರೀಕ ಸ್ಪರ್ಧೆಯಾಗಿದೆ ಎಂದು ಜರಿದರು.

ಸಾಹಿತ್ಯದ ಗಂಧ-ಗಾಳಿ ಗೊತ್ತಿಲ್ಲ:

ಕನ್ನಡ ಸಾಹಿತ್ಯ ಪರಿಷತ್ ಸ್ಪರ್ಧೆಗೆ ಸ್ಪರ್ಧಿಸುವವರು ಕನ್ನಡ ಶಾಲೆಯಲ್ಲಿ ಕಲಿತವರಾಗಿರಬೇಕು. ತಮ್ಮ ಕುಟುಂಬದವರನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಸುವ ವ್ಯಕ್ತಿಗಳಾಗಿರಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರು ಮಾತ್ರ ಈ ಸ್ಪರ್ಧೆಗೆ ಅರ್ಹರಾಗಿರುತ್ತಾರೆ. ಬದಲಿಗೆ ಬರೀ ವೇದಿಕೆಯಲ್ಲಿ ಕನ್ನಡ ಮಾತನಾಡಿದರೆ ಸಾಲದು ಎಂದರು.

ಓದಿ: ಪೊಲೀಸ್​ ಜೀಪ್​ನಲ್ಲಿ ಕೆಆರ್‌ಎಸ್ ಡ್ಯಾಂ ಮೇಲೆ ಯುವಕನ ಜಾಲಿ ರೈಡ್​ : ವಿಡಿಯೋ ವೈರಲ್

ಸಾಹಿತ್ಯದ ಗಂಧ, ಗಾಳಿ ಗೊತ್ತಿರದ ವ್ಯಕ್ತಿಗಳು ಸ್ಪರ್ಧಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ರಾಜಕಾರಣದ ಮುಖವನ್ನು ಪರಿಚಯಿಸುವಂತಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ವರ್ಷದಿಂದ ಕಸಾಪದಿಂದ ದೂರ ಇರುವೆ. ಈಗ ಮಾತ್ರ ಅಲ್ಲ, ಮುಂದೆ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಪಹರೆ ಗೋಡೆಯನ್ನು ಪ್ರವೇಶಿಸಲಾರೆ. ಇದಕ್ಕೆ ಕಾರಣವೂ ಇದೆ. ನನಗೆ ವೈಯಕ್ತಿಕ ಕೆಲಸಗಳು ಸಾಕಷ್ಟಿವೆ. ಸೇವಾ ನಿವೃತ್ತಿಯ ಜೀವನದಲ್ಲಿ ಒಳ್ಳೆಯ ಕೃತಿಗಳನ್ನು ಬರೆಯಲು ಯತ್ನಿಸುವೆ. ಇನ್ನಷ್ಟು ಕೃತಿಗಳನ್ನು ಓದುವೆ. ಹೀಗಾಗಿ, ಸಾಹಿತ್ಯ ಪರಿಷತ್​ನಿಂದ ಅಂತರ ಕಾಯ್ದುಕೊಳ್ಳುವೆ ಹೊರತು, ಸಾಹಿತ್ಯದಿಂದ ದೂರ ಇಲ್ಲ ಎಂದು ಕುಂ ವೀರಭದ್ರಪ್ಪ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.