ಕುಷ್ಟಗಿ : ಲಾಕ್‌ಡೌನ್ ಸಡಿಲಿಕೆಯಿಂದ ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಭಯ ತಗ್ಗಿದೆ. ಇಲ್ಲಿನ ಸಂತೆ ಮೈದಾನದಲ್ಲಿ ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಕೂಡ ಧರಿಸದೇ ನಿಯಮ ಉಲ್ಲಂಘಿಸುತ್ತಿರುವವರನ್ನು ಎಚ್ಚರಿಸಲು ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ.
ಸಾಮಾಜಿಕ ಅಂತರ ಮರೆತು ವ್ಯವಹರಿಸುತ್ತಿರುವ ಜನರನ್ನು ಎಚ್ಚರಿಸಲು ಪೊಲೀಸರು ಸಿವಿಲ್ ವಸ್ತ್ರದಲ್ಲಿ ಕಾರ್ಯಾಚರಣೆಗಿಳಿದಿದ್ದಾರೆ.
ಸಾಮಾಜಿಕ ಅಂತರ ಉಲ್ಲಂಘಿಸುವವರನ್ನು, ಮಾಸ್ಕ್ ಧರಿಸದೇ ಸಂಚರಿಸುವವರನ್ನು ಎಚ್ಚರಿಸುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಲಾಕ್‌ಡೌನ್ ಸಡಿಲಿಕೆಗೆ ಅಪಸ್ವರವೂ ಕೂಡ ವ್ಯಕ್ತವಾಗಿದೆ.