ಕುಷ್ಟಗಿ (ಕೊಪ್ಪಳ): ತಾನು ಕಲಿತ ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿ ಸ್ಮಾರ್ಟಕ್ಲಾಸ್ ಗೆ 60 ಸಾವಿರ ರೂ. ಅವರ ತಂದೆ, ತಾಯಿಗಳ ಹೆಸರಿನಲ್ಲಿ ದೇಣಿಗೆ ನೀಡಿದ್ದಾರೆ.
ಶಾಲೆಯ ಹಳೆ ವಿದ್ಯಾರ್ಥಿ ರಾಜಶೇಖರ್ ಕುರಿ ಅವರು ವೃತ್ತಿಯಿಂದ ಇಂಜಿನಿಯರ್ ಸೇವೆಯಲ್ಲಿದ್ದಾರೆ. ಅವರು ತಾಲೂಕಿನ ಮೇಣೆದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ತಾವು ಕಲಿತ ತಮ್ಮೂರ ಶಾಲೆಯನ್ನು ಮರೆತಿಲ್ಲ. ಏನಾದರೂ ಸೇವೆಯ ಯೋಚನೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಭವಿಷ್ಯದ ವಿದ್ಯಾರ್ಥಿಗಳಿಗೆ ಅನಕೂಲವಾಗಲು ಸ್ಮಾರ್ಟ್ ಕ್ಲಾಸ್ ಯೋಜನೆಯ ಬಗ್ಗೆ ಸಿಅರ್ ಪಿ ಶರಣಪ್ಪ ತುಮರಿಕೊಪ್ಪ ಪ್ರಸ್ತಾಪಿಸಿದಾಗ ಇಂಜಿನೀಯರ್ ರಾಜಶೇಖರ ಅವರು ಖುಷಿಯಿಂದ 60 ಸಾವಿರ ರೂಪಾಯಿಗಳನ್ನು ಸ್ಮಾರ್ಟ್ ಕ್ಲಾಸ್ ಗಾಗಿ ತಂದೆ, ತಾಯಿಗಳಾದ ಶ್ರೀ ಅಡಿವೆಪ್ಪ ಕುರಿ ಹಾಗೂ ನಾಗಮ್ಮ ಕುರಿಯವರ ಹೆಸರಿನಲ್ಲಿ ದೇಣಿಗೆ ನೀಡಿದ್ದಾರೆ.
ಈ ದೇಣಿಗೆಯನ್ನು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ 60 ಸಾವಿರ ಮೊತ್ತದ ಚೆಕ್ ಸ್ವೀಕರಿಸಿದರು. ಈ ಕುರಿತು ಮಾತನಾಡಿದ ಇಂಜಿನೀಯರ್ ರಾಜಶೇಖರ ಕುರಿ, ಸಂಪಾದಿಸಿದ ಒಂದಿಷ್ಟು ಸಂಪತ್ತಿನಲ್ಲಿ ನಾನು ಕಲಿತ ಶಾಲೆಗೆ ಹಂಚುವುದರಿಂದ ಬಹಳಷ್ಟು ಖುಷಿ ತಂದಿದೆ. ನನಗೆ ಇದೊಂದು ಸ್ಮರಣನೀಯ ದಿನ ಎಂದು ಸಂತಸ ವ್ಯಕ್ತಪಡಿಸಿದರು.
ಓದಿ : 30 ಸಾವಿರ ಕೋಟಿ ರೂ. ಹಗರಣ: ದಾಖಲೆ ಸಂಗ್ರಹಣೆಗೆ ಮುಂದಾದ ನಮೋ ಸಮಾಜ ಸಂಸ್ಥೆಯ ಪ್ರಮುಖ್ಗೆ ಜೀವ ಬೆದರಿಕೆ