ETV Bharat / state

ಮಹಿಳಾ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ.. ಕೈ ಮುಖಂಡನ ವಿರುದ್ಧ ದೂರು

ಮಳೆ ಹಾನಿಗೀಡಾದ ವರದಿಯಲ್ಲಿ ತನಗೆ ಬೇಕಿದ್ದವರ ಹೆಸರು ಸೇರಿಸುವಂತೆ ಒತ್ತಾಯ ಮಾಡಿದ್ದಲ್ಲದೇ, ನಿರಾಕರಿಸಿದ್ದಕ್ಕೆ ನನ್ನೊಂದಿಗೆ ತಕರಾರು ತೆಗೆದು ಮಳೆಹಾನಿ ಸರ್ವೇಗೆ ಅಡ್ಡಿಪಡಿಸಿದ್ದಾರೆ ಎಂದು ಲೆಕ್ಕಾಧಿಕಾರಿ ದೂರಿದ್ದಾರೆ.

Gangavathi Police station
ಗಂಗಾವತಿ ಪೊಲೀಸ್​ ಠಾಣೆ
author img

By

Published : Sep 9, 2022, 3:00 PM IST

ಗಂಗಾವತಿ: ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿ ಅಡ್ಡಿಪಡಿಸಿದ ಆರೋಪದ ಮೇಲೆ ಮಲ್ಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿಯಮಿತದ ಮಾಜಿ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಬಸವನ ದುರ್ಗದ ಹೊನ್ನಪ್ಪ ಎಂಬುವವರ ಮೇಲೆ ಆನೆಗೊಂದಿಯ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮಿ ರಾಜಪ್ಪ ಎಂಬುವವರು ಇಲ್ಲಿನ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಳೆಯಿಂದ ಹಾನಿಯಾದ ಪ್ರದೇಶವಾದ ಬಸವನದುರ್ಗಕ್ಕೆ ತೆರಳಿ ಸಮೀಕ್ಷೆ ಮಾಡಿ ವರದಿ ದಾಖಲಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಹೊನ್ನಪ್ಪ ಎಂಬುವವರು ಮಳೆ ಹಾನಿಗೀಡಾದ ವರದಿಯಲ್ಲಿ ತನಗೆ ಬೇಕಿದ್ದವರ ಹೆಸರು ಸೇರಿಸುವಂತೆ ಒತ್ತಾಯ ಮಾಡಿದ್ದಾರೆ. ಇದಕ್ಕೆ ನಿರಾಕರಿಸಿದ್ದರಿಂದ ಹೊನ್ನಪ್ಪ ನನ್ನೊಂದಿಗೆ ತಕರಾರು ತೆಗೆದು ನನ್ನ ಕೈಯಲ್ಲಿದ್ದ ಪೇಪರ್ ಕಸಿದು ಮಳೆಹಾನಿ ಸರ್ವೇಗೆ ಅಡ್ಡಿಪಡಿಸಿದ್ದಾರೆ. ಮಹಿಳೆ ಎಂದು ಪರಿಗಣಿಸದೇ ಅವಾಚ್ಯ ಶಬ್ದದಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಾಲಕ್ಷ್ಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕೋರ್ಟ್‌ಗೆ ಹಾಜರಾಗದೆ 10 ವರ್ಷ ತಲೆಮರೆಸಿಕೊಂಡ ಕೇರಳದ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.