ಕುಷ್ಟಗಿ: ಲಾಕ್ಡೌನ್ ಜಾರಿ ಆದಾಗಿನಿಂದ ಮಡಿವಾಳ ಸಮುದಾಯದ ವೃತ್ತಿಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಸಂಕಷ್ಟ ನಿರತರು ಅಲವತ್ತುಕೊಂಡರು.
ಬಟ್ಟೆ ತೊಳೆದರೆ ಇಸ್ತ್ರಿ ಮಾಡಿದರೆ ಮಾತ್ರ ಜೀವನ ನಿರ್ವಹಣೆಯ ಸಂಕಷ್ಟದ ಕಾಲದಲ್ಲಿ ಲಾಕ್ಡೌನ್ ಜಾರಿಯಿಂದ ಕೆಲಸವೇ ಇಲ್ಲ. ಖಾಲಿ ಕುಳಿತುಕೊಳ್ಳಲಾಗದೇ ಹೊಲ ಮನೆ ಕೆಲಸಮಾಡಿದ್ದು ಆಯ್ತು. ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುವ ಪೊಲೀಸರು, ಗೃಹರಕ್ಷಕರು, ಅಗ್ನಿಶಾಮಕ ದಳದ ಸಿಬ್ಬಂದಿ ಅವರ ಬಟ್ಟೆ ತೊಳೆದುಕೊಟ್ಟಿದ್ದು, ಬಿಟ್ಟರೆ ದಿನದ ಆದಾಯವಿಲ್ಲ.
ಈ ಸಂಕಷ್ಟದ ಸಂದರ್ಭದಲ್ಲಿ ತಾಲೂಕು ಆಡಳಿತ, ದಾನಿಗಳು ಆಹಾರ ಸಾಮಗ್ರಿ ಕಿಟ್ ವಿತರಿಸಿದ್ದರು. ಆದರೆ, ಕೊರೊನಾ ಸಂದರ್ಭದಲ್ಲಿ ಬಟ್ಟೆ ತೊಳೆಯುವುದು, ಇಸ್ತ್ರಿ ಮಾಡುವುದು ಸವಾಲಿನ ಕೆಲಸವಾಗಿದೆ ಜೀವನಕ್ಕಾಗಿ ಜೀವ ಲೆಕ್ಕಿಸದೇ ಕೆಲಸ ಮಾಡಬೇಕಿದೆ.
ಕಷ್ಟಕರ ಜೀವನದ ಪರಿಸ್ಥಿತಿಯಲ್ಲಿ ಸಿಎಂ ಯಡಿಯೂರಪ್ಪ ಸರ್ಕಾರ 5 ಸಾವಿರ ರೂ. ಪರಿಹಾರ ಪ್ರಕಟಿಸಿರುವುದು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.