ETV Bharat / state

ಯಲಬುರ್ಗಾ ತಾಲೂಕಿನ‌ಲ್ಲಿ ಬ್ಯಾಂಕ್ ಲೂಟಿ: 1ಕೋಟಿ ರೂ.ನಷ್ಟು ನಗ, ನಾಣ್ಯ ಕಳವು - ಒಂದು ಕೋಟಿ ರೂಪಾಯಿಯಷ್ಟು ನಗ ನಾಣ್ಯ ಕಳವು

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ‌ ಬೇವೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ ಕನ್ನ ಹಾಕಿದ ಖದೀಮರು ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಗ, ನಾಣ್ಯ ದೋಚಿದ್ದಾರೆ.

money and gold stolen from bank
ಯಲಬುರ್ಗಾ ತಾಲೂಕಿನ‌ಲ್ಲಿ ಬ್ಯಾಂಕ್ ಲೂಟಿ
author img

By

Published : Sep 24, 2020, 3:52 PM IST

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ‌ ಬೇವೂರು ಗ್ರಾಮದಲ್ಲಿ ಬ್ಯಾಂಕ್​ನಲ್ಲಿ ಕಳ್ಳತನವಾಗಿದ್ದು, ಒಂದು ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನಗ, ನಾಣ್ಯ ದೋಚಿ ಪರಾರಿಯಾಗಿದ್ದಾರೆ.

ಬೇವೂರು ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಶೆಟರ್​ ಅನ್ನು ಗ್ಯಾಸ್ ಕಟರ್​ನಿಂದ ಕಟ್ ಮಾಡಿ ಕಳ್ಳತನ ಮಾಡಲಾಗಿದೆ.

ಬೇವೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಕಳ್ಳತನ

ಚಿನ್ನ, ಬೆಳ್ಳಿ, ನಗದು ಸೇರಿ ಸುಮಾರು ಒಂದು ಕೋಟಿ ರುಪಾಯಿಯಷ್ಟು ಕಳ್ಳತನವಾಗಿದೆ. ಇದರ ಜೊತೆಗೆ ಬ್ಯಾಂಕ್​ನಲ್ಲಿದ್ದ ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ತೆಗೆದುಕೊಂಡು ಖದೀಮರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.