ಕೊಪ್ಪಳ: ಕೊಪ್ಪಳದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಮಾವು ಬೆಳೆಗಾರರನ್ನು ಪ್ರೋತ್ಸಾಹಿಸುವ ಮತ್ತು ಜಿಲ್ಲೆಯ ಜನರಿಗೆ ವಿವಿಧ ಬಗೆಯ ಮಾವುಗಳನ್ನು ಒಂದೇ ವೇದಿಕೆಯಡಿ ಪರಿಚಯಿಸುವ ನಿಟ್ಟಿನಲ್ಲಿ ಮೇ.30 ರ ವರೆಗೆ ಮಾವು ಮೇಳವನ್ನು ಆಯೋಜಿಸಲಾಗಿದೆ.
100 ವಿಧದ ಮಾವಿನ ಹಣ್ಣುಗಳ ಪ್ರದರ್ಶನ: ಕಳೆದ ಮೂರು ವರ್ಷಗಳಿಂದ ತೋಟಗಾರಿಕೆ ಇಲಾಖೆಯು ಮಾವು ಮೇಳ ಆಯೋಜಿಸುತ್ತಾ ಬರುತ್ತಿದೆ. ಇದರಿಂದಾಗಿ ಮಾವು ಪ್ರಿಯರಿಗೆ ಹಾಗೂ ಮಾವು ಬೆಳೆದ ರೈತರಿಗೆ ಅನುಕೂಲವಾಗುತ್ತಿದೆ. ಈ ಮೇಳದಲ್ಲಿ ಅಪೋಸ್, ದಶಹರಿ, ಕೇಸರ್ ಸೇರಿದಂತೆ ನಾನಾ ಬಗೆಯ ಮಾವಿನ ಹಣ್ಣುಗಳು ಮಾರಾಟ ಮಾಡಲಾಗುತ್ತಿದೆ.
ಸಾಯವಯ ಪದ್ಧತಿಯಲ್ಲಿ ಬೆಳೆಯಲಾಗಿರುವ ಮಾವಿನ ಹಣ್ಣುಗಳು ಇಲ್ಲಿ ಲಭ್ಯವಾಗುತ್ತಿವೆ. ಮೇಳದಲ್ಲಿ ಸುಮಾರು 100 ವಿಧದ ಮಾವಿನ ಹಣ್ಣುಗಳ ಪ್ರದರ್ಶನದ ಜೊತೆಗೆ ಜಿಲ್ಲೆಯ ರೈತರು ಬೆಳೆದಿರುವ ಮಾವಿನ ಹಣ್ಣುಗಳ ಮಾರಾಟ ಈ ಮೇಳದಲ್ಲಿ ನಡೆಯುತ್ತಿರುವುದರಿಂದ ಸಹಜವಾಗಿ ಮಾವು ಪ್ರಿಯರನ್ನು ಮೇಳ ಆಕರ್ಷಿಸುತ್ತಿದೆ.
ಸಾವಯವ ಮಾವು: ಈ ಮೇಳದಲ್ಲಿ ಸಾವಯವ ಹಾಗೂ ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಮೇಳಕ್ಕೆ ಬಂದರೆ ಮಾವಿನ ಹಣ್ಣುಗಳ ವಿವಿಧ ತಳಿಗಳ ಬಗ್ಗೆ ತಿಳಿದುಕೊಂಡು ಬೇಕಾದ ವೆರೈಟಿ ಹಣ್ಣನ್ನು ಖರೀದಿಸಬಹುದಾಗಿದೆ.
ಸ್ಥಳಿಯ ಮಾವು ಬೆಳೆಗಾರರಿಗೆ ಮಾತ್ರ ಆದ್ಯತೆ: ಮೇ.10ರ ವರೆಗೆ ನಡೆಯುವ ಈ ಮಾವು ಮೇಳದಲ್ಲಿ ಒಟ್ಟು 22 ಮಾವಿನ ಮಳಿಗೆ ಹಾಕಲಾಗಿದೆ. ಜಿಲ್ಲಾದ್ಯಂತ ಮಾವು ಬೆಳೆದಿರುವ ರೈತರಿಗೆ ಮಾತ್ರ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿವಿಧ ಬಗೆಯ ತಳಿಯ ಮಾವಿನ ಹಣ್ಣುಗಳನ್ನು ಬೆಳೆದಿರುವ ರೈತರು ಬಂದು ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.
ತೋಟಗಾರಿಕೆ ಇಲಾಖೆ ನಿಗದಿಪಡಿಸಿರುವ ದರದಂತೆ ಮಾರಾಟ ಮಾಡುತ್ತಿದ್ದಾರೆ. ಮಾವಿನ ಹಣ್ಣು ಬೆಳೆದಿರುವ ಪದ್ದತಿಯ ಕುರಿತಂತೆ ಗ್ರಾಹಕರಿಗೆ ಈ ಮೇಳದಲ್ಲಿ ತಿಳಿವಳಿಕೆ ನೀಡುವುದರ ಜತೆಗೆ ನಾವು ಬೆಳೆದಿರುವ ಹಣ್ಣನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಖುಷಿ ಕೊಟ್ಟಿದೆ ಎನ್ನುತ್ತಿದ್ದಾರೆ ಮಾವು ಬೇಳೆಗಾರರು.
ಮಾವು ಮೇಳದಲ್ಲಿ ನೈಸರ್ಗಿಕವಾಗಿ ಹಣ್ಣಾಗಿಸಿದ ಹಾಗೂ ಸಾವಯವ ಪದ್ದತಿಯಲ್ಲಿ ಬೆಳೆದಿರುವ ಮಾವಿನ ಹಣ್ಣಿನ ದರ ತುಸು ಜಾಸ್ತಿ ಇದೆ. ಆದರೆ ಹೊರಗಿನ ಮಾರುಕಟ್ಟೆಯಲ್ಲಿ ದರ 10 ರುಪಾಯಿ ಕಡಿಮೆ ಇದೆ. ಹೀಗಾಗಿ ಗ್ರಾಹಕರು ಮೇಳಕ್ಕೆ ಭೇಟಿ ನೀಡಿ ಮ್ಯಾಗೋ ರುಚಿ ಸವಿದು, ಮಾವು ಬೆಳೆಗಾರರನ್ನು ಪ್ರೋತ್ಸಾಹಿಸಬಹುದಾಗಿದೆ.
ಇದನ್ನೂ ಓದಿ: ಬಿ ವೈ ವಿಜಯೇಂದ್ರಗೆ ಕೈಕೊಡ್ತಾ ಬಿಜೆಪಿ ಹೈಕಮಾಂಡ್!?.. ಸಚಿವ ಹಾಲಪ್ಪ ಆಚಾರ್ ಹೀಗಂದರು..