ಗಂಗಾವತಿ: ಕೊರೊನಾ ಎರಡನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ತಕ್ಷಣದಿಂದಲೇ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಸೂಚಿಸಿದರು.
ತಾಲೂಕು ಪಂಚಾಯಿತಿಯ ಮಂಥನದಲ್ಲಿ ಕೈಗೊಂಡಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಕೋವಿಡ್-19 ಟೆಸ್ಟ್ಗಳಲ್ಲಿ ಶೇ.60ರಷ್ಟು ಫಲಿತಾಂಶ ಪಾಸಿಟಿವ್ ಬರುತ್ತಿದೆ. ಈ ಹಿನ್ನೆಲೆ ತಕ್ಷಣದಿಂದ ಅಧಿಕಾರಿಗಳು ಆಯಾ ಇಲಾಖೆಯ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಈಶ್ವರ ಸವಡಿ ಮಾತನಾಡಿ, ಮನುಕುಲಕ್ಕೆ ಕಂಟಕದ ರೂಪದಲ್ಲಿ ಕಾಡುತ್ತಿರುವ ಕೊರೊನಾದಿಂದ ಬದುಕುಳಿಯಲು ಲಸಿಕೆ ಮಾತ್ರ ಏಕೈಕ ದಾರಿ. ಕಡ್ಡಾಯವಾಗಿ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.