ETV Bharat / state

ಕೊಪ್ಪಳ: ಬೇವಿನ ಮರಕ್ಕೆ ಕಾರು ಡಿಕ್ಕಿ; ಮೂವರಿಗೆ ಗಂಭೀರ ಗಾಯ - innova car accident 3 were injured

ಬೇವಿನ ಮರಕ್ಕೆ ಇನ್ನೋವಾ ಕಾರು ಡಿಕ್ಕಿ ಹೊಡೆದು ಚಾಲಕ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾಗ್ಯನಗರ ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದಿದೆ.

innova-car-accident-3-were-injured
ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಇನ್ನೊವಾ ಕಾರು. ಮೂವರಿಗೆ ಗಂಭೀರ ಗಾಯ.
author img

By

Published : Feb 28, 2022, 11:00 AM IST

ಕೊಪ್ಪಳ: ಬೇವಿನ ಮರಕ್ಕೆ ಇನ್ನೋವಾ ಕಾರು ಡಿಕ್ಕಿ ಹೊಡೆದಿದ್ದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಭಾಗ್ಯನಗರ ಪಟ್ಟಣದ ಮುಖ್ಯರಸ್ತೆಯಲ್ಲಿ ತಡರಾತ್ರಿ ನಡೆದಿದೆ.

ಕಳಕಪ್ಪ ಗೆಜ್ಜೆ, ಕಳಕಪ್ಪ ಕುಕನೂರು ಹಾಗೂ ಚಾಲಕ ಜಾನ್ಸನ್ ಎಂಬುವವರು ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡು ಬೈಕ್‌ಗಳು ಜಖಂಗೊಂಡಿವೆ.

ಕೊಪ್ಪಳ ನಗರದ ನಿವಾಸಿಗಳಾದ ಈ ಮೂವರು ನಿನ್ನೆ ರಾತ್ರಿ ಹೊಟೇಲ್‌ವೊಂದರಲ್ಲಿ ಊಟ ಮುಗಿಸಿಕೊಂಡು ತಡರಾತ್ರಿ ಭಾಗ್ಯನಗರಕ್ಕೆ ಬಂದಾಗ ಅಂಚೆ ಕಚೇರಿ ಬಳಿ ಇರುವ ದೊಡ್ಡ ಬೇವಿನ ಮರಕ್ಕೆ ಕಾರು ಡಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ. ಮದ್ಯ ಸೇವಿಸಿ ಕಾರು ಚಾಲನೆ ಮಾಡಿದ್ದೇ ದುರ್ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ನಡೆದ ಸ್ಥಳ ಜನಸಂಚಾರದ ಪ್ರಮುಖ ಪ್ರದೇಶವಾಗಿದ್ದು, ಮಧ್ಯರಾತ್ರಿ ಅಪಘಾತ ಸಂಭವಿಸಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಕೊಪ್ಪಳ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ ಇತಿಹಾಸ: 21 ಕೋಟಿಯಿಂದ ಈವರೆಗಿನ ರಾಜ್ಯ ಬಜೆಟ್ ಗಾತ್ರದ ಸ್ವಾರಸ್ಯಕರ ಅಂಕಿ-ಅಂಶ ಹೀಗಿದೆ..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.