ಗಂಗಾವತಿ: ತಾಲೂಕಿನ ಚಿಕ್ಕರಾಂಪೂರದ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆಯ ಸಂದರ್ಭದಲ್ಲಿ ನಾಲ್ಕು ವಿದೇಶಿ ನಾಣ್ಯಗಳು ಪತ್ತೆಯಾಗಿವೆ. ಕಳೆದ 34 ದಿನಗಳಲ್ಲಿ ದೇವಸ್ಥಾನದ ಹುಂಡಿಯಲ್ಲಿ ಒಟ್ಟು 17.91 ಲಕ್ಷ ಮೊತ್ತದ ನಗದು ಸಂಗ್ರಹವಾಗಿದೆ. ಅದರಲ್ಲಿ ತಲಾ ಎರಡು ಯೂರೋಪ್ ಮತ್ತು ಸಿಂಗಾಪುರದ ನಾಣ್ಯಗಳು ಸಿಕ್ಕಿವೆ. ಜೂನ್ 23ರಂದು ಹುಂಡಿ ಎಣಿಕೆ ನಡೆದಾಗ 21.21 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು. ಹಣ ಎಣಿಕೆ ಕಾರ್ಯದ ನೇತೃತ್ವವನ್ನು ತಹಸೀಲ್ದಾರ್ ಯು.ನಾಗರಾಜ್ ವಹಿಸಿಕೊಂಡಿದ್ದರು.
ಇದನ್ನೂ ಓದಿ: ತಿರುಪತಿಯಲ್ಲಿ ಕಾರಿಗೆ ಲಾರಿ ಡಿಕ್ಕಿ: ಕರ್ನಾಟಕದ ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ