ETV Bharat / state

ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಹುದ್ದೆ.. ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ

author img

By

Published : Mar 27, 2023, 7:20 PM IST

Updated : Mar 27, 2023, 11:00 PM IST

ಕೊಪ್ಪಳ ಜಿಲ್ಲೆಯ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯ ಜಿಲ್ಲಾ ವ್ಯವಸ್ಥಾಪಕ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದೆ.

fight-between-two-officers-in-koppala
ಕೊಪ್ಪಳ:ಜಿಲ್ಲಾ ವ್ಯವಸ್ಥಾಪಕ ಹುದ್ದೆಗೆ ಅಧಿಕಾರಿಗಳಿಬ್ಬರ ಜಟಾಪಟಿ
ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯ ಜಿಲ್ಲಾ ವ್ಯವಸ್ಥಾಪಕ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ಉಂಟಾಗಿದೆ. ಪ್ರಸ್ತುತ ಪುಷ್ಪಲತಾ ಎಂಬುವವರು ಜಿಲ್ಲಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಹುದ್ದೆಯಲ್ಲಿದ್ದ ವೈ.ಎ. ಕಾಳೆ ಎಂಬುವವರು ಕೆಎಸ್​ಎಟಿಯಿಂದ ಆದೇಶ ತಂದು ಚಾರ್ಜ್ ತೆಗೆದುಕೊಳ್ಳಲು ಸೋಮವಾರ ಕಚೇರಿಗೆ ಬಂದಿದ್ದರು.

ಈ ವೇಳೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದ್ದು, ಕೆಎಸ್​ಎಟಿ ಆದೇಶ ನನ್ನ ಪರವಾಗಿದ್ದು ಪುಷ್ಪಲತಾ ಅವರು ಚಾರ್ಜ್ ನೀಡುತ್ತಿಲ್ಲ ಎಂದು ವೈ.ಎ. ಕಾಳೆ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪುಷ್ಪಲತಾ ಅವರು ಮಾತನಾಡಿ, ಕೆಎಟಿ ಆದೇಶ ಕಾಳೆ ಅವರ ಪರವಾಗಿದ್ದರೂ ಸರ್ಕಾರದ ಆದೇಶ ಬರಬೇಕು. ಹೀಗಾಗಿ ನಾನು ಅವರಿಗೆ ನಾನು ಚಾರ್ಜ್ ನೀಡುವುದಿಲ್ಲ. ಸರ್ಕಾರದ ಆದೇಶವಿರದೆ ನಾನು ಚಾರ್ಜ್ ಕೊಡೋದಿಲ್ಲ. ಚಾರ್ಜ್ ಕೊಟ್ಟು ನಾನು ಎಲ್ಲಿಗೆ ಹೋಗಬೇಕು?. ಸರ್ಕಾರ ಆದೇಶ ಹೊರಡಿಸಲಿ. ಅಲ್ಲಿಯವರೆಗೂ ನಾನು ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂದು ಹೇಳಿದರು.

ವೈ.ಎ. ಕಾಳೆ ಮಾತನಾಡಿ, ಜನವರಿ 5ನೇ ತಾರೀಖಿನವರೆಗೆ ಜಿಲ್ಲಾ ವ್ಯವಸ್ಥಾಪಕನಾಗಿ ನಾನು ಇಲ್ಲಿ ಕೆಲಸ ಮಾಡಿದ್ದೆ, ಪುಷ್ಪಲತಾ ಅವರು ಗ್ರೂಪ್​ ಬಿ ಅಧಿಕಾರಿಯಾಗಿದ್ದಾರೆ. ಈ ಹುದ್ದೆ ಗ್ರೂಪ್​ ಎ ಆಗಿದೆ. ಅವರು ಕುತಂತ್ರದಿಂದ ಸರ್ಕಾರದಿಂದ ಆದೇಶ ಮಾಡಿಸಿಕೊಂಡು ಬಂದಿದ್ದಾರೆ. ಇದನ್ನು ನಾನು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಬೆಳಗಾವಿಯಲ್ಲಿ ಪ್ರಶ್ನೆ ಮಾಡಿದ್ದೆ. ಎರಡು ತಿಂಗಳಿಂದ ವಾದ ವಿವಾದಗಳು ನಡೆದಿದ್ದು, ನ್ಯಾಯ ಮಂಡಳಿ 1/5/2023 ರಂದು ಸರ್ಕಾರ ಹೊರಡಿಸಿದ ಆದೇಶವನ್ನು ರದ್ದು ಮಾಡಿದೆ. ಈ ಕಾರಣದಿಂದ ಅಧಿಕಾರ ಸ್ವೀಕರಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.

ಇದನ್ನೂ ಓದಿ:ಕೊಪ್ಪಳದ ನಾಲ್ಕು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಕುತೂಹಲ ಹೆಚ್ಚಿಸಿದ ಗಂಗಾವತಿ ಕ್ಷೇತ್ರ

2ಬಿ ಮೀಸಲಾತಿ ರದ್ದಾಗಿರುವುದಕ್ಕೆ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ: ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿ ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೊಪ್ಪಳದಲ್ಲಿ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆದಿದೆ. ಕೊಪ್ಪಳದ ಗಡಿಯಾರ ಕಂಬದ ಸರ್ಕಲ್​ನಿಂದ ಅಶೋಕ ಸರ್ಕಲ್​ವರೆಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇತರ ಸಮುದಾಯಗಳಿಗೆ ಮೀಸಲಾತಿ ನೀಡಲು ನಮ್ಮ ಸಮುದಾಯದ ಮೀಸಲಾತಿ ತೆಗೆದುಹಾಕಿದ್ದು ನಮಗೆ ಮಾಡಿದ ಅನ್ಯಾಯವಾಗಿದೆ. ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವುದನ್ನು ನಾವು ವಿರೋಧಿಸುತ್ತಿಲ್ಲ. ಆದರೆ, ನಮ್ಮ ಮೀಸಲಾತಿ ತೆಗೆದು ಸರ್ಕಾರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ವಿವಿಧ ಸಮುದಾಯಗಳ ಮುಖಂಡರೂ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಯಮನೂರಪ್ಪ ನಾಯಕ್, ಕಾಂಗ್ರೆಸ್ ನ ಕಾಟನ ಪಾಷಾ, ಕೆ.ಎಂ. ಸಯ್ಯದ್, ಅಮ್ಜದ್ ಪಟೇಲ್, ಜೆಡಿಎಸ್ ಜಿಲ್ಲಾಧ್ಯಕ್ಷ ವಿರೇಶ ಮಹಾಂತಯ್ಯನಮಠ, ಮಲ್ಲು ಪೂಜಾರ ಸೇರಿದಂತೆ ಇತರರು ಭಾಗಿಯಾಗಿದ್ದರು.

ಇದನ್ನೂ ಓದಿ:ಗಂಗಾವತಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 60ಲಕ್ಷ ಹಣ, ಕಾರು ವಶಕ್ಕೆ ಪಡೆದ ಪೊಲೀಸರು..

Last Updated : Mar 27, 2023, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.