ಕುಷ್ಟಗಿ(ಕೊಪ್ಪಳ): ಕೋವಿಡ್ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನವನ್ನು ತಡೆದಿದ್ದಕ್ಕೆ ಪೊಲೀಸರೊಂದಿಗೆ ಕುಟುಂಬವೊಂದು ಕಿರಿಕ್ ಮಾಡಿಕೊಂಡಿದೆ.
ತಾಲೂಕಿನ ತಾವರಗೇರದಲ್ಲಿ ಮಾಸ್ಕ್ ಧರಿಸದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವನ್ನು ಪಿಎಸ್ಐ ಗೀತಾಂಜಲಿ ಶಿಂಧೆ ಪ್ರಶ್ನಿಸಿದರು. ಆ ವೇಳೆ ಅವರು, ನಾವು ಕಳ್ಳತನ ಮಾಡಿಲ್ಲ, ಗುಡಿಗೆ ಹೊರಟಿದ್ದೇವೆ. ನಮ್ ಗಾಡಿ ಯಾಕೆ ತಡೆಯುತ್ತೀರಿ ಎಂದು ಅಧಿಕಾರಿಗೆ ಪ್ರಶ್ನೆ ಮಾಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಯಾವ ದೇವಸ್ಥಾನ ತೆಗೆದಿರುತ್ತೆ ಎಂದು ಪ್ರಶ್ನಿಸಿದಾಗ ಉತ್ತರಿಸದೇ, ಮತ್ತೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಬಳಿಕ ಅಧಿಕಾರಿಗಳು ವಾಹನವನ್ನು ಸೀಜ್ ಮಾಡಿ ಕ್ರಮ ಕೈಗೊಂಡಿದ್ದಾರೆ.