ETV Bharat / state

ರೆಡ್ಡಿಯ ಕೆಆರ್​ಪಿಪಿ ಪಕ್ಷಕ್ಕೆ ಜಿಲ್ಲಾಮಟ್ಟದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸೇರ್ಪಡೆ

ರಾಜಕೀಯವಾಗಿ ಧೃವೀಕರಣಕ್ಕೆ ಮುಂದಾದ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ - ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ವಿವಿಧ ಪಕ್ಷಗಳ ಮುಂಂಡರು, ಕಾರ್ಯಕರ್ತರ ಸೇರ್ಪಡೆ - ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಕಣ್ಣೀರು ಬರಬಾರದು ಎಂದು ಒಂದು ವಾರ ತಯಾರಿ ನಡೆಸಿದ ರೆಡ್ಡಿ.

BJP leaders and workers Join KRPP party
ರೆಡ್ಡಿಯ ಕೆಆರ್​ಪಿಪಿ ಪಕ್ಷಕ್ಕೆ ಜಿಲ್ಲಾಮಟ್ಟದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸೇರ್ಪಡೆ
author img

By

Published : Jan 10, 2023, 9:15 PM IST

ಗಂಗಾವತಿ:2023ರ ಗಂಗಾವತಿ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ರಾಜಕೀಯವಾಗಿ ಧೃವೀಕರಣವನ್ನು ಆರಂಭಿಸಿದ್ದಾರೆ. ರೆಡ್ಡಿಯ ಹೊಸ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಬೇರೆ ಬೇರೆ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸೇರುತ್ತಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಮುಖ್ಯವಾಗಿ ಬಿಜೆಪಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಮುಖಂಡರು ವಲಸೆ ಬರಲು ಆರಂಭಿಸಿದ್ದಾರೆ. ಬಿಜೆಪಿ ಪಕ್ಷದ ನಾನಾ ಜವಾಬ್ದಾರಿಯುತ ಹಾಗೂ ಆಯಾಕಟ್ಟಿನ ಸ್ಥಾನಗಳಲ್ಲಿದ್ದ ಪ್ರಮುಖರು ಮಂಗಳವಾರ ನಡೆದ ಬೆಳವಣಿಗೆಯೊಂದರಲ್ಲಿ ಪಕ್ಷ ತೊರೆದು ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಸಮ್ಮುಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಪಕ್ಷದ ಸಂಸ್ಥಾಪಕ, ರಾಜ್ಯಾಧ್ಯಕ್ಷರೂ ಆಗಿರುವ ಜನಾರ್ದನ ರೆಡ್ಡಿ, ಕೆಆರ್​ಪಿಪಿ ಪಕ್ಷದ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿಯಿಂದ ಬಂದವರನ್ನು ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮನೋಹರಗೌಡ ಹೇರೂರು, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಯಮನೂರ ಚೌಡ್ಕಿ, ಶಿವಕುಮಾರ ಆದೋನಿ, ನಾಗರಾಜ ಚಳಿಗೇರಿ, ವೀರೇಶ ಸುಳೇಕಲ್, ವೀರೇಶ ಬಲ್ಕುಂದಿ, ಗ್ರಾಮೀಣ ಘಟಕದ ಮಾಜಿ ಅಧ್ಯಕ್ಷ ದುರುಗಪ್ಪ ಆಗೋಲಿ ಸೇರ್ಪಡೆಯಾದರು.

ರೈತ ಮೋರ್ಚಾ ಜಿಲ್ಲಾ ಮುಖಂಡ ಚನ್ನವೀರನಗೌಡ ಕೋರಿ, ಯುವ ಮುಖಂಡ ಹೀರೂರು ಚಂದ್ರು, ದುರುಗಪ್ಪ ದಳಪತಿ, ಶಂಬುನಾಥ ಚಲುವಾದಿ, ರವೀಂದ್ರ ಹಿರೇಮಠ, ವಾಲ್ಮಿಕಿ ಸಮುದಾಯದ ಆನಂದ್​ ಗೌಡ ಬೆಣಕಲ್, ಭಾಗ್ಯವಂತ ನಾಯಕ ಹತ್ತಿಮರದ, ಸಿದ್ದು ಮುದ್ದೆಬೀಹಾಳ, ಆಕಾಶ, ಬೆಟ್ಟಪ್ಪ ಸೇರಿದಂತೆ ಹಲವು ಯುವಕರು ಈ ಸಂದರ್ಭದಲ್ಲಿ ಸೇರ್ಪಡೆಯಾದರು.

ಇದಕ್ಕೂ ಮೊದಲು ಬಿಜೆಪಿ ಮುಖಂಡ ದೇವಪ್ಪ ಕಾಮದೊಡ್ಡಿ ಅವರ ಪತ್ನಿ ನಗರಸಭೆಯ ಮಾಜಿ ಅಧ್ಯಕ್ಷೆ ಹುಲಿಗೆಮ್ಮ ಸೇರಿದಂತೆ ಚಲುವಾದಿ ವಾಡದ ನೂರಾರು ಯುವಕರನ್ನು ರೆಡ್ಡಿ ಪಕ್ಷಕ್ಕೆ ಸ್ವಾಗತಿಸಿದರು. ಯುವಕರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿದ ಜನಾರ್ದನರೆಡ್ಡಿ, ನನ್ನ ಮೇಲೆ ವಿಶ್ವಾಸವಿಟ್ಟು, ಪಕ್ಷದ ಮೇಲೆ ನಂಬಿಕೆ ಇಟ್ಟು ಯುವಕರು ನನ್ನೊಂದಿಗೆ ಬರುತ್ತಿದ್ದಾರೆ. ಯುವ ಪಡೆ ನನ್ನೊಂದಿಗೆ ಇದ್ದರೆ ಖಂಡಿತ ಗಂಗಾವತಿಯನ್ನು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.

ಜನಾರ್ದನ ರೆಡ್ಡಿಯ ಜನ್ಮ ದಿನಾಚರಣೆಗೆ ಅದ್ಧೂರಿ ಸಿದ್ದತೆ: ರೆಡ್ಡಿಯ ಜನ್ಮ ದಿನಾಚರಣೆ ನಿಮಿತ್ತ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ಕೈಗೊಂಡಿದ್ದಾರೆ. ಐವತ್ತಕ್ಕೂ ಹೆಚ್ಚು ಅಡಿ ಎತ್ತರದ ಕಟೌಟ್​ಗಳನ್ನು ನಗರದಲ್ಲಿ ಅಳವಡಿಸಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ನಗರದಾದ್ಯಂತ ರಾರಾಜಿಸುತ್ತಿವೆ. ಬುಧವಾರ ನಗರದ ಹಿರೇಜಂತಕಲ್ನ ಪಂಪಾಪತಿ ದೇವಸ್ಥಾನದಿಂದ ರೆಡ್ಡಿಯ ಮನೆವರೆಗೂ ಒಂದು ಸಾವಿರ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯ ಆವರಣದಲ್ಲಿ ದೊಡ್ಡಮಟ್ಟದ ಕೇಕ್ ಕತ್ತರಿಸುವ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಣ್ಣೀರು ಬರಬಾರದು ಎಂದು ಒಂದು ವಾರ ತಯಾರಿ: ಕಳೆದ ಡಿಸಂಬರ್ 25ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಾನು ಸ್ವತಂತ್ರ ಪಕ್ಷ ಸ್ಥಾಪನೆ ನಿರ್ಧಾರ ಕೈಗೊಂಡಿದ್ದರ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದೆ. ಸುದ್ದಿಗೋಷ್ಠಿ ನಡೆಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಣ್ಣೀರು ಬರಬಾದರು ಎಂದು ಒಂದು ವಾರ ತಯಾರಿ ಮಾಡಿಕೊಂಡಿದ್ದೆ ಎಂದು ಕೆಆರ್​ಪಿಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮಾತೃ ಪಕ್ಷದಂತೆ ಇದ್ದ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ನಾನು ಪಟ್ಟಿದ್ದ ಕಷ್ಟ, ನನ್ನ ತ್ಯಾಗ, ಶ್ರಮ ಎಲ್ಲವೂ ಕಡೆಗಣಿಸಿ ಪಕ್ಷದಲ್ಲಿನ ನಾಯಕರು ನನ್ನನ್ನು ನಡೆಸಿಕೊಂಡ ರೀತಿ ಬೇಸರವಾಗಿತ್ತು. ಕಳೆದ ಎರಡು ದಶಕದಿಂದ ಬಿಜೆಪಿ ಪಕ್ಷದೊಂದಿಗೆ ನನಗಿದ್ದ ಸಂಬಂಧ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್ ಮತ್ತು ಎಲ್ .ಕೆ. ಅಡ್ವಾಣಿಯಂತಹ ಮಹಾನ್ ನಾಯಕರು ಪ್ರತಿನಿಧಿಸಿದ್ದ ಪಕ್ಷದಲ್ಲಿ ಏನೆಲ್ಲಾ ನಡೆದು ಹೋಗುತ್ತಿದೆ ಎಂದು ನೆನೆಯುತ್ತಿದ್ದರೆ ನೋವಾಗುತ್ತಿದೆ ಎಂದರು.

ಗಂಗಾವತಿಯನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ: ಇಡೀ ಕರ್ನಾಟಕಕ್ಕೆ ಗಂಗಾವತಿಯನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುತ್ತೇನೆ. ನಾನು ಜನರಿಗೆ ಏನನ್ನು ಭರವಸೆ ನೀಡುತ್ತೇನೋ ಅದನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರುತ್ತೇನೆ. ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಆನೆಗೊಂದಿ ಉತ್ಸವ ಅದ್ಧೂರಿಯಾಗಿ ಆಚರಿಸಲು ಶ್ರಮಿಸಿದ್ದೆ. ಕೇವಲ ಉತ್ಸವ ಮಾತ್ರವಲ್ಲ, ಎಲ್ಲ ಧಾರ್ಮಿಕ ತಾಣಗಳ ಅಭಿವೃದ್ಧಿ, ಎಲ್ಲ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದರು.

ಇದನ್ನೂ ಓದಿ:ರಾಜ್ಯದಲ್ಲಿರುವುದು ಜನಾಶೀರ್ವಾದದ ಸರ್ಕಾರವಲ್ಲ, ಅಪರೇಷನ್​ ಕಮಲದ ಸರ್ಕಾರ: ಹೆಚ್​ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.