ಕೊಪ್ಪಳ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬವನ್ನು ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ದರ್ಶನ್ ಅಭಿಮಾನಿಗಳಾದ ಮಂಜೂರ ಹುಸೇನ್, ವಿಶ್ವನಾಥ, ಸಚಿನ್, ಮುತ್ತಪ್ಪ, ವೀರೇಶ ಸೇರಿದಂತೆ ಅನೇಕ ಯುವಕರು ಸೇರಿಕೊಂಡು ಇಂದು ಬೆಳಗ್ಗೆ ಗ್ರಾಮದ ಬಸ್ ನಿಲ್ದಾಣದ ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟೌಟ್ ಹಾಕಿ ಸಂಭ್ರಮಿಸಿದರು. ಬಳಿಕ ಅಲ್ಲಿದ್ದ ನೂರಾರು ಜನರಿಗೆ ಸಿಹಿ ಹಂಚಿದರು.