ಗಂಗಾವತಿ: ವಿವಾದಾತ್ಮಕ ಭಾಷಣದಿಂದ ಗಮನ ಸೆಳೆಯುವ ಸಂಘ ಪರಿವಾರದ ಚೈತ್ರಾ ಕುಂದಾಪುರ ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದರು.
2017ರ ವಿಧಾನಸಭಾ ಚುನಾವಣೆಯ ಸಂದರ್ಭ ಗಂಗಾವತಿ ಕ್ಷೇತ್ರದಲ್ಲಿ ಮಾಡಿದ್ದ ವಿವಾದಾತ್ಮಕ ಹಾಗೂ ಕೋಮುಭಾವನೆ ಕೆರಳಿಸುವ ಭಾಷಣ ಮಾಡಿದ್ದರು ಎಂದು ಆರೋಪಿಸಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ದೂರು ದಾಖಲಿಸಿದ್ದರು.
ಅಲ್ಲದೇ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಕಾನೂನು ಉಲ್ಲಂಘಿಸಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದರು. ಈ ಹಿನ್ನೆಲೆ ಕಳೆದ ಎರಡು ಬಾರಿ ಸತತ ಗೈರು ಹಾಜರಾಗಿದ್ದ ಚೈತ್ರಾ, ಮಂಗಳವಾರ ಕೋರ್ಟ್ಗೆ ಹಾಜರಾದರು.