ETV Bharat / state

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದಷ್ಟು ಬಿಜೆಪಿ ವೀಕು: ಜಗದೀಶ್ ಶೆಟ್ಟರ್

ರಾಜ್ಯ ಬಿಜೆಪಿ ನಾಯಕರ ಮೇಲೆ ಕೇಂದ್ರದವರಿಗೆ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಇನ್ನೂ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ- ಜಗದೀಶ್ ಶೆಟ್ಟರ್, ಕಾಂಗ್ರೆಸ್ ನಾಯಕ

author img

By ETV Bharat Karnataka Team

Published : Oct 22, 2023, 9:42 PM IST

ಮಾಜಿ ಸಿಎಂ ಜಗದೀಶ್ ಶೆಟ್ಟರ್
ಮಾಜಿ ಸಿಎಂ ಜಗದೀಶ್ ಶೆಟ್ಟರ್

ಗಂಗಾವತಿ (ಕೊಪ್ಪಳ): ರಾಜ್ಯಾಧ್ಯಕ್ಷ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗದಷ್ಟು ಬಿಜೆಪಿ ರಾಜ್ಯದಲ್ಲಿ ಬಲಹೀನವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

ತಾಲ್ಲೂಕಿನ ಮರಳಿಯಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಇಷ್ಟೊಂದು ವೀಕ್ ಆಗಿರುವ ರಾಷ್ಟ್ರೀಯ ಪಕ್ಷವನ್ನು ನಾನು ನೋಡಿಲ್ಲ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಕೇಂದ್ರದ ನಾಯಕರಿಗೆ ರಾಜ್ಯ ಬಿಜೆಪಿಯ ಯಾವ ನಾಯಕರ ಮೇಲೂ ವಿಶ್ವಾಸವಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲ ಸಿಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಬಿಜೆಪಿಯ ಯಾರನ್ನೂ ಬೆನ್ನು ಹತ್ತಿ ಕಾಂಗ್ರೆಸ್​ಗೆ ಸೇರ್ಪಡೆ ಮಾಡುತ್ತಿಲ್ಲ. ಬಿಜೆಪಿಯಲ್ಲಿನ ಅವ್ಯವಸ್ಥೆ, ನಾಯಕತ್ವದ ಕೊರತೆಯಿಂದಾಗಿ ಸಾಮಾನ್ಯ ಕಾರ್ಯಕರ್ತರಿಂದ ರಾಜ್ಯ ಮಟ್ಟದ ನಾಯಕರು ಪಕ್ಷ ತೊರೆಯಲು ನನ್ನನ್ನು ಸಂಪರ್ಕ ಮಾಡುತ್ತಿದ್ದಾರೆ. ಸ್ವಇಚ್ಚೆಯಿಂದ ಬರುತ್ತೇವೆ ಎಂದವರನ್ನು ನಾನು ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಿಸುತ್ತಿದ್ದೇನೆ. ಲೋಕಸಭೆ ಚುನಾವಣೆ ವೇಳೆಗೆ ಸಾಕಷ್ಟು ಜನ ಕಾಂಗ್ರೆಸ್​ಗೆ ಬರುತ್ತಾರೆ. ಆದರೆ, ಸಂಸದೆ ಮಂಗಳಾ ಅಂಗಡಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ನಾನು ಅವರ ಜತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಶೆಟ್ಟರ್ ತಿಳಿಸಿದರು.

ದಾವಣಗೆರೆಯಲ್ಲಿನ ವೀರಶೈವ ಲಿಂಗಾಯತರ ಸಮಾವೇಶ ಮುಗಿದ ಅಧ್ಯಾಯ. ಅದನ್ನು ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಶಾಮನೂರು ಶಿವಶಂಕ್ರಪ್ಪ ಪರಿಹಾರ ಮಾಡಿಕೊಳ್ಳುತ್ತಾರೆ. ವೀರಶೈವ ಮಹಾಸಭಾ ಒಂದು ಪಕ್ಷಕ್ಕೆ ಸೀಮಿತ ಅಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಸಮಾಜದ ಜನರನ್ನು ಜೋಡಿಸಿ ಸಮಾವೇಶ ಮಾಡುವುದು ತಪ್ಪಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಬಣ ಇಲ್ಲ. ವೈಯಕ್ತಿಕ ಅಭಿಪ್ರಾಯ ಹೇಳುತ್ತಾರೆಯೇ ಹೊರತು ಅದು ಬಣ ಅಲ್ಲ. ಅದಕ್ಕೆ ಯಾವುದೇ ಲೇಬಲ್ ಹಚ್ಚಬಾರದು ಎಂದರು.

ಹೊಸ ಕಾರು ಖರೀದಿ ತಪ್ಪಲ್ಲ: ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಹೊಸ ಕಾರು ಖರೀದಿ ಮಾಡುತ್ತಿದೆ. ಇದಕ್ಕೂ ಬರಗಾಲಕ್ಕೂ ಸಂಬಂಧವಿಲ್ಲ. ಇಂತಿಷ್ಟು ವರ್ಷದ ನಂತರ ಕಾರು ಬದಲಾಯಿಸಬೇಕು ಎಂಬ ನಿಯಮದಂತೆ ಖರೀದಿ ಪ್ರಕ್ರಿಯೆ ನಡೆದಿದೆ ಎಂದ ಶೆಟ್ಟರ್,​ ರಾಜ್ಯ ಸರಕಾರವು ಸಚಿವರಿಗೆ ಹೊಸ ಕಾರು ಖರೀದಿಸಿದ್ದನ್ನು ಸಮರ್ಥಿಸಿಕೊಂಡರು.

ಪಕ್ಷದ ಶಿಸ್ತು ಕಾಪಾಡಲು ಡಿ.ಕೆ.ಶಿವಕುಮಾರ್​ ಸಾರ್ವಜನಿಕವಾಗಿ ಅನಗತ್ಯ ಹೇಳಿಕೆ ನೀಡದಂತೆ ಶಾಸಕರಿಗೆ ತಾಕೀತು ಮಾಡಿದ್ದಾರೆ. ಅಸಮಾಧಾನ ಇದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಬಹಿರಂಗ ಹೇಳಿಕೆ ನೀಡಬೇಡಿ ಎಂದಿದ್ದಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.
ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಮೊದಲು ಬಿಜೆಪಿ ಎಂದರೆ ಏನೇನೋ ಮಾತನಾಡುತ್ತಿದ್ದರು. ಬಿಜೆಪಿ ಅಂದ್ರೆ ಹೌಹಾರುತ್ತಿದ್ದರು. ಈಗ ಅವರ ಜತೆ ಸೇರಿದ್ದಾರೆ. ಅದು ಅವರ ಪಕ್ಷದ ಹಣೆಬರಹ. ಅದಕ್ಕೆ ಸಿಎಂ ಇಬ್ರಾಹಿಂ ಅವರೇ ಉತ್ತರ ಕೊಡುತ್ತಿದ್ದಾರೆ.

ನನಗೆ ಬಿಜೆಪಿಯಲ್ಲಿ ಗೌರವ ಸಿಗದ ಕಾರಣ ಹೊರಬಂದೆ. ಷರತ್ತಿಲ್ಲದೇ ಕಾಂಗ್ರೆಸ್ ಸೇರಿದ್ದೇನೆ. ಈ ಮೂಲಕ ಬಿಜೆಪಿಗೆ ಪಾಠ ಕಲಿಸಿ, ನನ್ನ ಕೆಲಸ ನಾನು ಮಾಡಿದ್ದೇನೆ. ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿದ್ದೇನೆ ಎಂಬ ಮಾತಿಗೆ ಅರ್ಥ ಇಲ್ಲ. ಉತ್ತರ ಕರ್ನಾಟಕ ಸುತ್ತಿ ಪಕ್ಷ ಸಂಘಟನೆ ಮಾಡಿದ್ದೇನೆ. ಅದಕ್ಕೆ ಅಧಿಕಾರ ಅನುಭವಿಸಿದ್ದೇನೆ ಎಂದು ಶೆಟ್ಟರ್​ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಬಿಜೆಪಿ ಜತೆ ಮೈತ್ರಿ ಬೇಡ, ದಯವಿಟ್ಟು ನಿರ್ಧಾರ ಮರುಪರಿಶೀಲಿಸಿ: ದೇವೇಗೌಡರಿಗೆ ಸಿ.ಎಂ.ಇಬ್ರಾಹಿಂ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.