ಕುಷ್ಟಗಿ (ಕೊಪ್ಪಳ): ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಕೋವಿಡ್-19 ಪರಿಹಾರ ಪ್ಯಾಕೇಜ್ಅನ್ನು ಅಸಂಘಟಿತ ಕಾರ್ಮಿಕರಿಗೆ ವಿತರಿಸುವ ರೀತಿಯಲ್ಲಿ ಅತಿಥಿ ಶಿಕ್ಷಕರಿಗೂ ನೀಡುವಂತೆ ಆಗ್ರಹಿಸಿ ಇಲ್ಲಿನ ತಾಲೂಕಾಡಳಿತದ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
![covid-19 package](https://etvbharatimages.akamaized.net/etvbharat/prod-images/kn-kst-01-19-guest-teacher-kac10028_19052020124904_1905f_1589872744_671.jpg)
ಮಂಗಳವಾರ ಇಲ್ಲಿನ ತಹಶೀಲ್ದಾರರ ಕಚೇರಿಯಲ್ಲಿ ಶಿರೆಸ್ತೇದಾರ ರಜನೀಕಾಂತ ಕೆಂಗಾರಿಗೆ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಕಾಂತ ಕಿರಗಿ ಮನವಿ ಸಲ್ಲಿಸಿ ಮಾತನಾಡಿ, ಕೋವಿಡ್-19 ಲಾಕ್ಡೌನ್ ನಿಯಮ ಜಾರಿಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸೇವೆಯಲ್ಲಿರುವ ಅತಿಥಿ ಶಿಕ್ಷಕರಿಗೆ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿದರು.
ಈಗಿರುವ ಗೌರವಧನದಲ್ಲಿ ಜೀವನ ನಿರ್ವಹಣೆ ಕೂಡ ಕಷ್ಟವಾಗಿದೆ. ಗೌರವಧನ ಪರಿಷ್ಕೃತಗೊಳಿಸುವ ಜೊತೆಗೆ ಇ.ಎಸ್.ಐ., ಪಿ.ಎಫ್ ಸೌಲಭ್ಯ ಹಾಗೂ ಸೇವ ಭಧ್ರತೆಯನ್ನು ಸಲ್ಲಿಸುವ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇನ್ನು ಈ ವೇಳೆ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಬಸವರಾಜ್ ಗುಡಿ, ಮುದಿಯಪ್ಪ, ಮಾನಪ್ಪ, ಹನಮಂತಪ್ಪ, ನಯೀಮ್ ಖಾನ್, ಶಾಂತಾ ಕೆ. ಮತ್ತಿತರರಿದ್ದರು.