ETV Bharat / state

ವಾರದ ಮದ್ಯ ಒಂದೇ ದಿನ ಮಾರಾಟ.. ವಿಸ್ಕಿ, ರಮ್​, ವೋಡ್ಕಾ ಫುಲ್‌ ಕಿಕ್‌.. ಬಿಯರ್​ ಸೇಲ್ ಡಲ್‌!!

author img

By

Published : May 5, 2020, 2:23 PM IST

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸೋಮವಾರ ಏಳು ಪಟ್ಟು ಆದಾಯ ಹೆಚ್ಚಿದೆ. ಕೊರೊನಾ ವೈರಸ್ ಭೀತಿಯ ನಡುವೆ ಉರಿ ಬಿಸಿಲನ್ನೂ ಲೆಕ್ಕಿಸದೆ ಸಾಲಿನಲ್ಲಿ ನಿಂತು‌ ಕುಡುಕರು ಮದ್ಯ ಖರೀದಿಸಿದ್ದಾರೆ. ಬಿಯರ್ ಖರೀದಿಗಿಂತ ವಿಸ್ಕಿ, ರಮ್, ಜಿನ್, ವೈನ್, ವೋಡ್ಕಾ ಮಾರಾಟವೇ ಜಾಸ್ತಿಯಾಗಿದೆ.

Alcohol sales in record number
ವಾರದ ಮದ್ಯ ಒಂದೇ ದಿನದಲ್ಲಿ ಮಾರಾಟ

ಕುಷ್ಟಗಿ : 42 ದಿನಗಳಿಂದ ಬಂದ್​ ಆಗಿದ್ದ ಮದ್ಯದ ಅಂಗಡಿಗಳು‌ ಸೋಮವಾರ ತೆರೆದುಕೊಂಡಿವೆ. ವಾರದಲ್ಲಿ ಮಾರಾಟವಾಗುವ ಮದ್ಯ ಒಂದೇ ದಿನನದಲ್ಲಿ ಮಾರಾಟವಾಗಿದೆ ಎಂದು ಅಬಕಾರಿ ನಿರೀಕ್ಷಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸೋಮವಾರ ಏಳು ಪಟ್ಟು ಆದಾಯ ಹೆಚ್ಚಿದೆ. ಕೊರೊನಾ ವೈರಸ್ ಭೀತಿಯ ನಡುವೆ ಉರಿ ಬಿಸಿಲನ್ನೂ ಲೆಕ್ಕಿಸದೆ ಸಾಲಿನಲ್ಲಿ ನಿಂತು‌ ಕುಡುಕರು ಮದ್ಯ ಖರೀದಿಸಿದ್ದಾರೆ. ಬಿಯರ್ ಖರೀದಿಗಿಂತ ವಿಸ್ಕಿ, ರಮ್, ಜಿನ್, ವೈನ್, ವೋಡ್ಕಾ ಮಾರಾಟವೇ ಜಾಸ್ತಿಯಾಗಿದೆ.

ತಾಲೂಕಿನಲ್ಲಿ ಸಿಎಲ್-2 ಪರವಾನಿಗೆ ಪಡೆದ ಮದ್ಯದ ಅಂಗಡಿಗಳು19, ಎಂಎಸ್​ಐಎಲ್-7 ಇವೆ. ಇವುಗಳಲ್ಲಿ ಸಿಎಲ್-2 ಮದ್ಯದಂಗಡಿಗಳಲ್ಲಿ ಭಾರತೀಯ ತಯಾರಿಕಾ ಮದ್ಯ ಒಟ್ಟು 8,597 ಲಿ. ಹಾಗೂ ಬಿಯರ್ 1,769 ಲೀಟರ್ ಖರೀದಿಯಾಗಿದೆ. ಎಂಎಸ್​ಐಎಲ್ ಮಾರಾಟ ಮಳಿಗೆಗಳಲ್ಲಿ ಭಾರತೀಯ ತಯಾರಿಕಾ ಮದ್ಯ 2,899 ಲೀಟರ್​ ಹಾಗೂ ಬಿಯರ್ 402 ಲೀಟರ್​ನಷ್ಟು ಖರೀದಿಯಾಗಿದೆ ಎಂದು ಅಬಕಾರಿ ನಿರೀಕ್ಷಕ ಹೊನ್ನೂರು ವಲಿ‌ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.