ETV Bharat / state

ವಿವಸ್ತ್ರನಾಗಿ ಬಂದು ಆಶಾ ಕಾರ್ಯಕರ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ - gangavati latest news

ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲು ಕರೆತಂದಿದ್ದ ಆಶಾ ಕಾರ್ಯಕರ್ತೆಯೊಬ್ಬರು ಮಲಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಗರದ ಚನ್ನಬಸವ ಸ್ವಾಮಿ ನರ್ಸಿಂಗ್​ ಹೋಂನಲ್ಲಿ ನಡೆದಿದೆ.

ವಿವಸ್ತ್ರನಾಗಿ ಬಂದು ಆಶಾ ಕಾರ್ಯಕರ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ
A man trying to rape on women in gangavathi
author img

By

Published : Apr 18, 2021, 7:02 PM IST

ಗಂಗಾವತಿ: ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲು ಕರೆತಂದಿದ್ದ ಆಶಾ ಕಾರ್ಯಕರ್ತೆಯೊಬ್ಬರು ಮಲಗಿದ್ದ ವೇಳೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಗರದ ಚನ್ನಬಸವ ಸ್ವಾಮಿ ನರ್ಸಿಂಗ್​ ಹೋಂನಲ್ಲಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆ ನೀಡಿದ ದೂರಿನ ಮೇರೆಗೆ ಕನಕಗಿರಿ ತಾಲೂಕಿನ ಬಸರಿಹಾಳದ ಬಾಲಪ್ಪ ಮುದುಕಪ್ಪ ಎಂಬ 59 ವರ್ಷ ವ್ಯಕ್ತಿಯ ಮೇಲೆ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಘಟನೆಯ ವಿವರ:

ಬಸರಿಹಾಳ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಗರ್ಭಿಣಿಗೆ ಹೆರಿಗೆ ಮಾಡಿಸಲು ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಸಕಾಲಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಸಾಧ್ಯವಾಗದ ಹಿನ್ನೆಲೆ, ಆಶಾ ಕಾರ್ಯಕರ್ತೆ ಗರ್ಭಿಣಿಯನ್ನು ಚನ್ನಬಸವಸ್ವಾಮಿ ನರ್ಸಿಂಗ್​ ಹೋಂಗೆ ದಾಖಲಿಸಿದ್ದಾರೆ. ಬಳಿಕ ಮಧ್ಯರಾತ್ರಿ ಗರ್ಭಿಣಿಗೆ ಹೆರಿಗೆಯಾಗಿದೆ.

ಮಧ್ಯರಾತ್ರಿ ಹೆರಿಗೆಯಾಗಿದ್ದರಿಂದ ಊರಿಗೆ ತೆರಳಲು ಸಾಧ್ಯವಾಗದ್ದರಿಂದ ಆಶಾ ಕಾರ್ಯಕರ್ತೆ ಇದೇ ಆಸ್ಪತ್ರೆಯಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಮಲಗಿದ್ದಾರೆ. ಈ ಸಂದರ್ಭದಲ್ಲಿ ಕೋಣೆಗೆ ಆಗಮಿಸಿದ ಬಾಲಪ್ಪ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಾನು ವಿವಸ್ತ್ರನಾಗಿ ಬಂದು, ಕಾರ್ಯಕರ್ತೆಯ ಬಟ್ಟೆ ತೆಗೆಯಲು ಮುಂದಾಗಿದ್ದಾನೆ. ಎಚ್ಚರಗೊಂಡ ಕಾರ್ಯಕರ್ತೆ ಈ ಕೃತ್ಯದಿಂದ ಬಚಾವ್​ ಆಗಿದ್ದಾರೆ. ಇಷ್ಟೇ ಅಲ್ಲದೆ ಈ ವಿಚಾರ ಯಾರ ಬಳಿಯಲ್ಲಾದರೂ ಹೇಳಿದರೆ ಜೀವನ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನಂತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.